ಕರ್ನಾಟಕ

ಜಂಟಿ ಕಾರ್ಯಾಚರಣೆ : ಮೂವರು ನಕ್ಸಲರ ಎನ್ ಕೌಂಟರ್‌

Pinterest LinkedIn Tumblr

ಪಾಲಕ್ಕಾಡ್: ಓರ್ವ ಮಹಿಳೆ ಸೇರಿದಂತೆ ಒಟ್ಟು ಮೂವರು ನಕ್ಸಲರನ್ನು ಎನ್ ಕೌಂಟರ್‌ನಲ್ಲಿ ಕೊಂದ ಘಟನೆ ಕೇರಳದ ಪಾಲಕ್ಕಡ್ ಜಿಲ್ಲೆಯ ಮಂಜಕಟ್ಟಿ ಬೆಟ್ಟದಲ್ಲಿ ನಡೆದಿದೆ.

ಕಾರ್ತಿಕ್, ಸುರೇಶ್ ಮತ್ತು ಶ್ರೀಮತಿ ಎನ್ ಕೌಂಟರ್ ನಲ್ಲಿ ಮೃತಪಟ್ಟ ನಕ್ಸಲರು.

ನಕ್ಸಲ್ ನಿಗ್ರಹ ಪಡೆ ಮತ್ತು ಥಂಡರ್ ಬೌಲ್ಟ್ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಎನ್ ಕೌಂಟರ್ ಮಾಡಲಾಗಿದೆ. ನಾಲ್ವರು ನಕ್ಸಲರು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.

ಘಟನೆಯಲ್ಲಿ ರಾಜ್ಯದ ಚಿಕ್ಕಮಗಳೂರಿನ ಇಬ್ಬರು ಮೃತಪಟ್ಟಿದ್ದಾರೆ. ಶ್ರೀಮತಿ ಮತ್ತು ಸುರೇಶ್ ಚಿಕ್ಕಮಗಳೂರಯ ಜಿಲ್ಲೆಯವರಾಗಿದ್ದ ಹಲವಾರು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.

ಶೃಳಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದ ಶ್ರೀಮತಿ 2008ರಿಂದ ನಕ್ಸಲ್ ಚಟುವಟಿಕೆಯಲ್ಲಿದ್ದು, ಆಕೆಯ ಮೇಲೆ 12 ಪ್ರಕರಣಗಳು ದಾಖಲಾಗಿವೆ.

ಸುರೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನಾಗಿದ್ದು, 2004ರಲ್ಲಿ ನಕ್ಸಲ್ ಗುಂಪಿಗೆ ಸೇರಿದ್ದ. ಪಾಲಕ್ಕಾಡ್ ನಲ್ಲಿ ಸೋಮವಾರ ಗುಂಡೇಟಿಗೆ ಬಲಿಯಾದ ಸುರೇಶ್ ಮೇಲೆ 40 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ವರದಿಯಾಗಿದೆ.

Comments are closed.