ಕರ್ನಾಟಕ

ಎಸ್‍ಎಸ್‍ಎಲ್‍ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

Pinterest LinkedIn Tumblr


ಬೆಂಗಳೂರು: ಪ್ರಸಕ್ತ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು, 2020 ಮಾರ್ಚ್ 20 ರಿಂದ ಏಪ್ರಿಲ್ 3 ವರೆಗೆ ಪರೀಕ್ಷೆ ನಡೆಯಲಿದೆ.

ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 19ರ ವರೆಗೆ ಅವಕಾಶ ನೀಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಬೇಕಾದರೆ, ನೇರವಾಗಿ ಕರ್ನಾಟಕ ಶಿಕ್ಷಣಾ ಮಂಡಳಿ ಇಲಾಖೆಗೆ ಆಕ್ಷೇಪಣಾ ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬಹುದಾಗಿದೆ.

ತಾತ್ಕಾಲಿಕ ವೇಳಾಪಟ್ಟಿ ವಿವರ:
ಮಾರ್ಚ್ 20 – ಪ್ರಥಮ ಭಾಷೆ ವಿಷಯಗಳು, ಮಾರ್ಚ್ 21 – ಕೋರ್ ಸಬ್ಜೆಕ್ಟ್ (ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ), ಮಾರ್ಚ್ 23- ಸಮಾಜ ವಿಜ್ಞಾನ, ಮಾರ್ಚ್ 26 – ವಿಜ್ಞಾನ, ಮಾರ್ಚ್ 30 – ಗಣಿತ, ಏಪ್ರಿಲ್ 1 – ದ್ವಿತೀಯ ಭಾಷೆ ವಿಷಯಗಳು, ಏಪ್ರಿಲ್ 3 – ತೃತೀಯ ಭಾಷೆಯ ವಿಷಯಗಳ ಪರೀಕ್ಷೆಗಳು ನಿಗದಿಯಾಗಿದೆ.

Comments are closed.