ಕರ್ನಾಟಕ

ಡಿಕೆಶಿ ಮಡದಿ, ಅಮ್ಮನಿಗೂ ಜಾರಿ ನಿರ್ದೇಶನಾಲಯದಿಂದ ಸಮನ್ಸ್

Pinterest LinkedIn Tumblr


ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಹಾಗೂ ತಾಯಿ ಗೌರಮ್ಮ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಅಕ್ಟೋಬರ್ 17ರಂದು ವಿಚಾರಣೆಗೆ ಹಾಜರಾಗುವಂತೆ ಉಷಾ ಶಿವಕುಮಾರ್ ಮತ್ತು ಡಿಕೆ ತಾಯಿಗೆ ಸಮನ್ಸ್ ಜಾರಿ ಮಾಡಿರುವುದಾಗಿ ವರದಿ ತಿಳಿಸಿದೆ.

2013ರಲ್ಲಿ ಡಿಕೆ ಶಿವಕುಮಾರ್ ಪತ್ನಿ ಹೆಸರಿನಲ್ಲಿ 35 ಕೋಟಿ ರೂಪಾಯಿ ಆಸ್ತಿ ಇದ್ದಿರುವುದಾಗಿ ಘೋಷಿಸಿಕೊಂಡಿದ್ದರು. ಆದರೆ ಈಗ ಡಿಕೆಶಿ ಪತ್ನಿ ಉಷಾ ಅವರ ಹೆಸರಿನಲ್ಲಿ 112 ಕೋಟಿ ರೂಪಾಯಿ ಆಸ್ತಿ ಇದ್ದಿರುವುದಾಗಿ ಘೋಷಿಸಿಕೊಂಡಿದ್ದಾರೆ.

86 ಕೋಟಿ ಸ್ಥಿರಾಸ್ತಿ , 28 ವಾಣಿಜ್ಯ ಕಟ್ಟಡಗಳ ಮೌಲ್ಯ 36 ಕೋಟಿ ರೂಪಾಯಿ. 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹೊಂದಿರುವುದಾಗಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದ ಅಫಿಡವಿತ್ ನಲ್ಲಿ ಉಷಾ ಶಿವಕುಮಾರ್ ಘೋಷಿಸಿಕೊಂಡಿದ್ದರು.

Comments are closed.