ಕರ್ನಾಟಕ

22 ಜಿಲ್ಲೆಗಳನ್ನು ಭೀಕರ ಮಳೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳೆಂದು ಘೋಷಣೆ: ಕಂದಾಯ ಸಚಿವ ಆರ್‌ ಅಶೋಕ್‌

Pinterest LinkedIn Tumblr


ಬೆಂಗಳೂರು: ರಾಜ್ಯದ 22 ಜಿಲ್ಲೆಗಳನ್ನು ಭೀಕರ ಮಳೆ ಮತ್ತು ಪ್ರವಾಹ ಪೀಡಿತ ಜಿಲ್ಲೆಗಳಾಗಿ ಘೋಷಿಸಲಾಗಿದೆ. 70 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.

ಇತ್ತೀಚಿನ ಭಾರೀ ಮಳೆ ಮತ್ತು ಭೀಕರ ಪ್ರವಾಹ ಕುರಿತು ವಿಧಾನಪರಿಷತ್‌ನಲ್ಲಿ ನಡೆದ ಚರ್ಚೆಯ ಮಧ್ಯೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಮಾಡಿದ ಪ್ರಸ್ತಾಪವೊಂದಕ್ಕೆ ಕಂದಾಯ ಸಚಿವ ಅಶೋಕ್‌ ವಿವರಣೆ ನೀಡಿದರು.

1.20 ಲಕ್ಷಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ. ಈ ಪೈಕಿ ಹೆಚ್ಚು ಹಾನಿಗೊಳಗಾಗಿರುವ ಎ ಮತ್ತು ಬಿ ವರ್ಗದ 42.300 ಮನೆಗಳಿಗೆ ೫ ಲಕ್ಷ ರೂಪಾಯಿ ನೀಡಲಾಗಿದೆ. ಹಾನಿಗೊಳಗಾದ ಸಿ ದರ್ಜೆಯ 77,500 ಕ್ಕೂ ಹೆಚ್ಚು ಮನೆಗಳಿಗೆ ಪರಿಹಾರ ಧನವನ್ನು 50 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದರು.

ಇನ್ನು ಮಳೆ ಬೀಳುತ್ತಿದ್ದು, ಮುಂದೆಯೂ ಹಾನಿಗೆ ಒಳಗಾಗುವ ಮನೆಗಳಿಗೆ ಪರಿಹಾರ ನೀಡಲಾಗುತ್ತದೆ. 118 ವರ್ಷಗಳ ನಂತರ ರಾಜ್ಯದಲ್ಲಿ ಇಂತಹ ಭೀಕರ ಪರಿಸ್ಥಿತಿ ತಲೆದೋರಿದೆ ಎಂದು ಸಚಿವರು ತಿಳಿಸಿದರು.

ಮಹಾರಾಷ್ಟ್ರದ ಅಣೆಕಟ್ಟುಗಳಿಂದ 9 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಕೃಷ್ಣಾ, ಭೀಮಾ, ಮಲಪ್ರಭಾ ನದಿಗಳಿಗೆ ಹರಿಸಿದ್ದರಿಂದ ಈ ಬಾರಿ ನೆರೆಹಾವಳಿ ಇಷ್ಟೊಂದು ಭೀಕರವಾಗಿದೆ ಎಂದು ಸಚಿವ ಆರ್‌ ಅಶೋಕ ವಿವರಿಸಿದರು.

Comments are closed.