ಕರ್ನಾಟಕ

ಐಟಿ ಅಧಿಕಾರಿಗಳಿಂದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತೀವ್ರ ವಿಚಾರಣೆ

Pinterest LinkedIn Tumblr


ತುಮಕೂರು : ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆ, ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಬೆನ್ನಲ್ಲೆ ಇದೀಗ ಜಿ.‌ಪರಮೇಶ್ವರ್ ಅವರನ್ನು ತೀವ್ರ ವಿಚಾರಣೆ ಒಳಪಡಿಸಲಾಗಿದೆ.

ಕೊರಟಗೆರೆಯಲ್ಲಿ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪರಮೇಶ್ವರ್ ಅವರನ್ನು ಪ್ರವಾಸಿ ಮಂದಿರದಲ್ಲಿರಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಇಬ್ಬರು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇನೋವಾ ಕಾರಿನಲ್ಲಿ ಕೊರಟಗೆರೆಗೆ ಆಗಮಿಸಿದ್ದ ಐಟಿ ಅಧಿಕಾರಿಗಳು. ಬಾಗಿನ ಅರ್ಪಿಸಿದ ಕಾರ್ಯಕ್ರಮ ಮುಗಿದ ತಕ್ಷಣವೇ ನೇರವಾಗಿ ಕೊರಟಗೆರೆ ಪ್ರವಾಸಿ ಮಂದಿರಕ್ಕೆ ಪರಮೇಶ್ವರ್ ರನ್ನು ಕರೆದುಕೊಂಡು ಬಂದಿದ್ದಾರೆ. ಆ ಬಳಿಕ ವಿಚಾರಣೆ ನಡೆಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

Comments are closed.