
ಹಾರೋಹಳ್ಳಿ: ಮಗ ಮತ್ತು ಸೊಸೆಯ ಕಾಟ ತಾಳಲಾರದೆ ಬೆಂಗಳೂರಿನ ಹಾರೋಹಳ್ಳಿಯಿಂದ ಮನೆ ಬಿಟ್ಟು ಬಂದು ಬೀದಿ ಬೀದಿ ತಿರುಗುತ್ತ ತುತ್ತು ಅನ್ನಕ್ಕಾಗಿ ಅಂಗಲಾಚುತ್ತಿದ್ದ ವೃದ್ಧೆಯೊಬ್ಬರನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ಮಧುಗಿರಿ ತಾಲೂಕಿನ ಐಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಓಡಾಡಿಕೊಂಡಿದ್ದ ಅಜ್ಜಿಯನ್ನು ಕಂಡು ಹಲವು ಯುವಕರು ಯಾರೋ ಭಿಕ್ಷಕರು ಬಂದಿರಬೇಕು ಎಂದು ಸುಮ್ಮನಾಗಿದ್ದಾರೆ. ನಿಂತ ಸ್ಥಳದಲ್ಲೇ ಆ ತಾಯಿ ಕುಸಿದು ಬಿದ್ದಿದ್ದಾರೆ. ನಂತರ ಆಕೆಯನ್ನು ರಕ್ಷಿಸಿ ಪೋಷಿಸಿದಾಗಲೇ ನಿಜಾಂಶ ಗೊತ್ತಾಗಿದೆ.
ಇವರು ಬೆಂಗಳೂರಿನ ಹಾರೋಹಳ್ಳಿ ಶಾಂತಮ್ಮ ಎಂಬುದು ತಿಳಿದು ಬಂದಿದ್ದು ಮಗ ಸೊಸೆ ನನ್ನ ಮೇಲೆ ಹಲ್ಲೆ ನಡೆಸುತ್ತಾರೆ ನಾನು ಮನೆಗೆ ಹೋಗುವುದಿಲ್ಲ ಎಂದಾಗ ಗ್ರಾಮಸ್ಥರೆಲ್ಲಾ ಸೇರಿ ತುಮಕೂರಿನ ಶಾರದಾಂಬಾ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.
ಶಾರದಾಂಬಾ ಸಂಸ್ಥೆಯ ಅಧ್ಯಕ್ಷೆ ಯಶೋಧ ವೃದ್ಧೆಗೆ ಪ್ರಥಮ ಚಿಕಿತ್ಸೆ ಕೊಡಿಸಿ ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಅದೇನೆ ಇರಲಿ ಇಂತಹ ತಾಯಿಯನ್ನು ಹೊರ ಹಾಕುವ ಮಕ್ಕಳಿಗೆ ತಕ್ಕ ಶಾಸ್ತಿಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Comments are closed.