ಅಂತರಾಷ್ಟ್ರೀಯ

ಊಬರ್ ನಿಂದ ಹೆಲಿಕಾಪ್ಟರ್ ಸೇವೆ ಆರಂಭ!

Pinterest LinkedIn Tumblr


ನ್ಯೂಯಾರ್ಕ್ : ವಿಶ್ವದಾದ್ಯಂತ ಪ್ರಯಾಣಿಕರಿಗೆ ಆ್ಯಪ್ ಮೂಲಕ ಬಾಡಿಗೆ ಕಾರು ಸೇವೆ ಒದಗಿಸುವ ಊಬರ್ ಸಂಸ್ಥೆ ಈಗ ಬಾಡಿಗೆ ಹೆಲಿಕಾಪ್ಟರ್ ಸೇವೆ ನೀಡಲು ಆರಂಭಿಸಿದೆ.

ಸದ್ಯ ಈ ಸೇವೆ ಅಮೆರಿಕಾದ ನ್ಯೂಯಾರ್ಕಿನ ಮ್ಯಾನ್ ಹಟ್ಟನ್ನಿಂದ ಜೆಕೆಎಫ್ ನಿಲ್ದಾಣದವರೆಗೂ ಲಭ್ಯವಿರಲಿದ್ದು, ಮುಂದಿನ ದಿನಗಳಲ್ಲಿ ಅಮೆರಿಕಾದ ಎಲ್ಲ ಪ್ರಮುಖ ನಿಲ್ದಾಣಗಳಲ್ಲೂ ಸೇವೆಯನ್ನು ವಿಸ್ತರಿಸಲಾಗುತ್ತದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಹೆಲಿಕಾಪ್ಟರ್ ಬುಕ್ ಮಾಡುವ ಪ್ರಯಾಣಿಕರಿಗೆ ಮನೆಯ ಬಳಿಯೇ ಸೇವೆ ಒದಗಿಸಲಾಗುವುದಿಲ್ಲ. ಮನೆಯಿಂದ ಏರ್ ಪೋರ್ಟ್ ತನಕ ಕಾರಿನಲ್ಲಿ ಕರೆದುಕೊಂಡು ನಂತರ ಕಾಪ್ಟರ್ ಸೇವೆ ನೀಡಲಾಗುತ್ತದೆ. 8 ನಿಮಿಷದ ಸೇವೆಗೆ 200 ರಿಂದ 225 ಡಾಲರ್ ವರೆಗೂ ಶುಲ್ಕ ವಿಧಿಸಲಾಗುತ್ತದೆ.

ಇದು ಕೂಡ ಆ್ಯಪ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ. ಮುಂದಿನ 4 ವರ್ಷಗಳಲ್ಲಿ ಏರ್ ಟ್ಯಾಕ್ಸಿ ಸೇವೆಯನ್ನು ವಿಶ್ವದ ಪ್ರಮುಖ ನಗರಗಳಲ್ಲಿ ಒದಗಿಸಲು ಊಬರ್ ಯೋಜನೆ ರೂಪಿಸಿದ್ದು, ಭಾರತದ ಪ್ರಮುಖ ನಗರಗಳ ಪ್ರಯಾಣಿಕರು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವ ದಿನ ದೂರವಿಲ್ಲ.

Comments are closed.