ಕರ್ನಾಟಕ

ಸೋನಿಯಾಗೆ ಸಿದ್ದರಾಮಯ್ಯ ಬೆದರಿಕೆ..?

Pinterest LinkedIn Tumblr


ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಲು ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಅಧಿವೇಶನಕ್ಕೆ ಉಳಿದಿರೋದು ಕೇವಲ ಆರು ದಿನ ಮಾತ್ರ ಬಾಕಿ. ಆದರೆ, ಇನ್ನೂ ವಿರೋಧ ಪಕ್ಷ ನಾಯಕರ ನೇಮಕವಾಗಿಲ್ಲ. ಇರೋ ಒಂದು ಸೀಟಿಗಾಗಿ ಮೂವರ ನಡುವೆ ನೇರಾ ನೇರ ಪೈಪೋಟಿ ಏರ್ಪಟ್ಟಿದೆ. ಒಂದೆಡೆ ಸಿದ್ದರಾಮಯ್ಯ, ಮತ್ತೊಂದೆಡೆ ಡಾ.ಜಿ,ಪರಮೇಶ್ವರ್, ಇವರಿಬ್ಬರ ನಡುವೆ ಹೆಚ್.ಕೆ.ಪಾಟೀಲ್ ಲಾಬಿ ಜೋರಾಗಿದೆ.

ಒಂದು ಹೆಜ್ಜೆ ಮುಂದೆ ಹೋಗಿರುವ ಹೆಚ್.ಕೆ.ಪಾಟೀಲ್, ಪರಮೇಶ್ವರ್‌ಗೆ ಬೇಕಾದರೆ ಕೊಡಿ. ಆದರೆ, ಸಿದ್ದರಾಮಯ್ಯಗೆ ಮಾತ್ರ ಕೊಡಬೇಡಿ ಎಂದು ಹೈಕಮಾಂಡ್​ ಮುಂದೆ ಬಲವಾದ ವಾದ ಮಂಡಿಸಿದ್ದಾರೆ. ಪದೇ ಪದೇ ದೆಹಲಿಗೆ ತೆರಳಿ ಎಐಸಿಸಿ ನಾಯಕರ ಭೇಟಿ ಮಾಡಿ ಸಿದ್ದುಗೆ ಸ್ಥಾನ ತಪ್ಪಿಸೋಕೆ ಪ್ರಯತ್ನ ಮುಂದುವರಿಸಿದ್ದಾರೆ. ದೆಹಲಿಗೆ ಹೋಗಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಒಟ್ಟಾಗಿದ್ದಾರೆ. ಪರಮೇಶ್ವರ್, ಹೆಚ್‌.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್​ ಪರಸ್ಪರ ಕೈ ಜೋಡಿಸಿದ್ದಾರೆ. ಸಿದ್ದರಾಮಯ್ಯಗೆ ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿಸೋದು ಇವರ ಏಕೈಕ ಗುರಿ. ಆದರೆ, ವಿರೋಧ ಪಕ್ಷದ ನಾಯಕನಾಗಲೇ ಬೇಕು ಅನ್ನೋದು ಸಿದ್ದು ಹಠ. ಇದೀಗ ಲಾಬಿ ಕೈಬಿಟ್ಟು, ಹೈಕಮಾಂಡ್​ಗೆ ಬೆದರಿಕೆ ಹಾಕಿದ್ದಾರೆ. ನನಗೆ ಸ್ಥಾನ ತಪ್ಪಿಸಿದ್ರೆ ಬೈ ಎಲೆಕ್ಷನ್​ನಲ್ಲಿ ತಟಸ್ಥನಾಗ್ತೇನೆ ಎಂದು ಎಚ್ಚರಿಸಿದ್ದಾರೆ. ಇದರಿಂದ ಹೈಕಮಾಂಡ್​ ಗೊಂದಲಕ್ಕೆ ಸಿಲುಕಿದೆ. ಅಳೆದು ತೂಗಿ ನೇಮಕ ಮಾಡಲು ಮುಂದಾಗಿದೆ.

ಮತ್ತೊಂದೆಡೆ ಮಾಜಿ ಡಿಸಿಎಂ ಪರಮೇಶ್ವರ್ ಕೂಡ ಸೋನಿಯಾ ಭೇಟಿ ಮಾಡಿ ಸಿದ್ದರಾಮಯ್ಯಗೆ ಪ್ರತಿಪಕ್ಷ ಸ್ಥಾನ ನೀಡದಂತೆ ಈಗಾಗಲೇ ಮನವಿ ಮಾಡಿದ್ದಾರೆ. ಸಿಎಲ್​ಪಿ ಲೀಡರ್​ ಮಾಡಿದ್ದೀರ, ಪ್ರತಿಪಕ್ಷ ನಾಯಕ ಸ್ಥಾನ ನನಗೆ ಕೊಡಿ. ಇಲ್ಲವೇ ಸಿಎಲ್ಪಿ ನನಗೆ ಕೊಡಿ, ಸಿದ್ದರಾಮಯ್ಯಗೆ ವಿರೋಧ ಪಕ್ಷ ನಾಯಕನ ಸ್ಥಾನ ನೀಡಿ ಅಂತ ಸಲಹೆಯನ್ನೂ ಕೊಟ್ಟುಬಂದಿದ್ದಾರೆ. ಹೀಗಾಗಿ, ಹೈಕಮಾಂಡ್​ ಸಿದ್ದರಾಮಯ್ಯಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಿ, ಪರಂಗೆ ಸಿಎಲ್‌ಸಿ ಲೀಡರ್ ಸ್ಥಾನ ಕರುಣಿಸುವ ಬಗ್ಗೆಯೂ ಅಲೋಚಿಸುತ್ತಿದೆಯಂತೆ.

ವಿರೋದ ಪಕ್ಷದ ನಾಯಕ ಸ್ಥಾನ ಕೊಡದಿದ್ರೆ ಉಪಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲ್ಲ ಅನ್ನೋ ಮೇಸೇಜ್‌ ಅನ್ನು ಆಪ್ತರ ಮೂಲಕ ಹೈಕಮಾಂಡ್‌ಗೆ ಸಿದ್ದು ತಲುಪಿಸಿದ್ದಾರೆ.

ಇದರ ನಡುವೆ ಪರಮೇಶ್ವರ್​, ಹೆಚ್ಕೆಪಿ ಕೂಡ ಸಿದ್ದರಾಮಯ್ಯಗೆ ಕೊಟ್ರೆ ನಾವು ಸುಮ್ಮನಿರಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ. ಹೀಗಾಗಿ, ಅಧಿವೇಶನ ಹತ್ತಿರಬಂದರು ಹೈಕಮಾಂಡ್​ ಇನ್ನೂ ವಿರೋಧ ಪಕ್ಷದ ನಾಯಕ ಸ್ಥಾನ ತುಂಬುವ ವಿಚಾರದಲ್ಲಿ ಹಿಂದೇಟು ಹಾಕ್ತಿರೋದು ಗುಟ್ಟಾಗಿ ಉಳಿದಿಲ್ಲ.

Comments are closed.