ಕರ್ನಾಟಕ

ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರ ಡ್ಯಾನ್ಸ್ ದೃಶ್ಯ ವೈರಲ್

Pinterest LinkedIn Tumblr


ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಾಧೀಶರು ತಮ್ಮ ಸ್ವಗ್ರಾಮದಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ ತಮಟೆಯ ಸದ್ದಿಗೆ ಕುಣಿದು ಹೆಜ್ಜೆ ಹಾಕಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಅಗಿದೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಪೆದ್ದೂರು ಗ್ರಾಮದಲ್ಲಿ ಕಳೆದ ಶನಿವಾರ ರಾತ್ರಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಮೊಹರಂ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿ ಗೋಪಾಲ ಗೌಡರು ತಮಟೆಯ ಸದ್ದಿಗೆ ಕುಣಿದು ಕಲಾವಿದರ ಜೊತೆ ಹೆಜ್ಜೆ ಹಾಕಿ ಕಲಾವಿದರನ್ನು ಹುರಿದುಂಬಿಸಿದರು.

ವರ್ಷಕ್ಕೊಮ್ಮೆ ಪೆದ್ದೂರಿನಲ್ಲಿ ಮೊಹರಂ ಹಬ್ಬವನ್ನು ಎಲ್ಲ ಧರ್ಮದ ಜನ ಒಗ್ಗೂಡಿ ಭಾವೈಕೈತೆಯಿಂದ ಆಚರಿಸುತ್ತಾ ಬರುತ್ತಿದ್ದಾರೆ. ಈ ವರ್ಷ ಮೊಹರಂ ಹಬ್ಬದ ವೇಳೆ ಗ್ರಾಮದಲ್ಲಿಯೆ ಇದ್ದ ನ್ಯಾಯಮೂರ್ತಿ ವಿ.ಗೋಪಾಲಗೌಡರು, ಮೆರವಣೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದಾರೆ.

ಗ್ರಾಮೀಣ ಜನಪದ ಕಲೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಗೋಪಾಲ ಗೌಡರು, ಕಳೆದ ಮೂರು ವರ್ಷಗಳ ಹಿಂದೆ ಪೆದ್ದೂರಿನಲ್ಲಿ ರಾಜ್ಯ ಮಟ್ಟದ ಜನಪದ ಉತ್ಸವ ಆಯೋಜಿಸಿದ್ದರು.

Comments are closed.