ಮನೋರಂಜನೆ

ಬೀಚ್​ನಲ್ಲಿ ಬಾಲಿವುಡ್ ನಟನ ಪುತ್ರಿಯ​ ರೊಮ್ಯಾನ್ಸ್​

Pinterest LinkedIn Tumblr


ಹಿರಿಯ ನಟ ಜಾಕಿ ಶ್ರಾಫ್​ ಮಗಳು ಹಾಗೂ ಬಾಲಿವುಡ್​ನ ಸ್ಟಂಟ್​ ಮ್ಯಾನ್​ ಟೈಗರ್​ ಶ್ರಾಫ್​​ ಸಹೋದರಿ ಕೃಷ್ಣಾ ಶ್ರಾಫ್​ ಸದ್ಯ ಇಂಟರ್​ನೆಟ್​ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾಳೆ.ಬಾಸ್ಕೆಟ್​ಬಾಲ್​ ಆಟಗಾರನಾದ ಇಬಾನ್ ಹೈಮ್ಸ್ ಜೊತೆ ಬೀಚ್​ನಲ್ಲಿ ಬಿಕನಿ ಅವತಾರದಲ್ಲಿ ಸುತ್ತಾಡುತ್ತಿದ್ದು ಫೋಟೋಸ್​ ವೈರಲ್​ ಆಗಿವೆ.

ಇನ್ನೂ ಬಣ್ಣದ ಜಗತ್ತಿಗೆ ಹೆಜ್ಜೆಯಿಟ್ಟಲ್ಲ ಆದ್ರೆ ದಿನಕ್ಕೊಂದು ಸುದ್ದಿ ಮಾಡಿ ಫ್ಯಾನ್ಸ್​ಗೆ ಚಿರಪರಿಚಿತವಾದ ಹೆಸರು ಕೃಷ್ಣಾ ಶ್ರಾಫ್​

ಈಕೆ ಭಾರತೀಯ ಚಿತ್ರರಂಗದ ಹಿರಿಯ ನಟ ಜಾಕಿ ಶ್ರಾಫ್​ ಮಗಳು ಹಾಗೂ ಬಾಲಿವುಡ್​ನ ಸ್ಟಂಟ್​ ಮ್ಯಾನ್​ ಟೈಗರ್​ ಶ್ರಾಫ್​​ ಸಹೋದರಿ

ಬಿಕನಿ, ವರ್ಕೌಟ್ ಜೊತೆಗೆ ಹೊಸ ಹೊಸ ಬಾಯ್​ಫ್ರೆಂಡ್​ ಜೊತೆ ಸುತ್ತಾಡುವುದರ ಮೂಲಕ ಬಿ – ಟೌನ್​ನ ಗಾಸಿಪ್​ ಕ್ವೀನ್​ ಆಗಿದ್ದಾಳೆ

ಇದೀಗ ಬಾಸ್ಕೆಟ್​ಬಾಲ್​ ಆಟಗಾರನಾದ ಇಬಾನ್ ಹೈಮ್ಸ್ ಜೊತೆ ಬೀಚ್​ನಲ್ಲಿ ಸುತ್ತಾಡುತ್ತಿದ್ದಾಳೆ

ಆಸ್ಟ್ರೇಲಿಯಾದ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇಬಾನ್ ಹೈಮ್ಸ್​ಗೆ ಸಲ್ಲುತ್ತದೆ

ದುಬೈನಲ್ಲಿ ಬಿಕನಿ ಹಾಕಿ ಪ್ರಿಯಕರನೊಂದಿಗಿನ ಫೋಟೋಗಳನ್ನು ಅಪ್ಲೋಡ್​​ ಮಾಡಿದ್ದಾಳೆ

26 ವರ್ಷದ ಕೃಷ್ಣ ಶ್ರಾಫ್​ ಫಿಟ್​ನೆಸ್ ಫ್ರಿಕ್​ ಆಗಿದ್ದು, ತನ್ನದೇ ಸ್ವಂತ ಫಿಟ್​ನೆಸ್​ ಟ್ರೈನಿಂಗ್​​ ಸೆಂಟರ್​ ಓಪನ್​ ಮಾಡಿದ್ದಾಳೆ

ಈ ಹಿಂದೆ ಪಾರಸ್​​ ನಾಯಲ್​ ಎಂಬ ಫಿಟ್​ನೆಸ್​ ಎಕ್ಸ್​ಪರ್ಟ್ ಜೊತೆ ಡೇಟಿಂಗ್​ ಮಾಡುತ್ತಿದ್ದಳು. ಆದ್ರೆ, ಸಂಬಂಧ ಸ್ವಲ್ಪ ಕಾಲದಲ್ಲೇ ಮುರಿದು ಬಿತ್ತು

ನನ್ನ ಲವ್​ ವಿಷಯದಲ್ಲಿ ಫ್ಯಾಮಿಲಿಯಿಂದ ಅನುಮತಿ ಕೇಳುವ ಅಗತ್ಯವಿಲ್ಲ ಎಂದು ಖುದ್ದು ಅವಳೇ ಹೇಳಿದ್ದೂ ಉಂಟು

Comments are closed.