ಕರ್ನಾಟಕ

ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ರೆ ಕಠಿಣ ಕ್ರಮ: ಶ್ರೀರಾಮುಲು..!

Pinterest LinkedIn Tumblr


ಚಾಮರಾಜನಗರ: ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ರೆ ಕಠಿಣ ಕ್ರಮ ಜರುಗಿಸಲಾಗುತ್ತೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸರ್ಕಾರಿ ವೈದ್ಯರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಬಳಿಕ ಸರ್ಕಾರಿ ವೈದ್ಯರಿಗೆ ಖಡಕ್ ಸಂದೇಶ ರವಾನಿಸಿದ ಶ್ರೀರಾಮುಲು, ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಎರಡೂ ಕಡೆ ಕೆಲಸ ಮಾಡಿದ್ರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇದು ಒಂದು ದೊಡ್ಡ ದಂಧೆಯಾಗಿದೆ. ಇದನ್ನು ಕೂಡಲೇ ತಡೆಗಟ್ಟುತ್ತೇನೆ. ಬೇಕಾದ್ರೆ ವಾಲೆಂಟರಿ ರಿಟೈರ್ಮೆಂಟ್ ಕೊಟ್ಟು ಹೋಗಲಿ. ಅಂತವರಿಂದ ನಮಗೆ ಅವಶ್ಯಕತೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಅವರು ಎಂಥಾ ತಜ್ಞ ವೈದ್ಯರಾದರೂ ಸರಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ನಾನು ನಾಳೆಯಿಂದಲೇ ಆದೇಶ ಹೊರಡಿಸುತ್ತೇನೆ. ಯಾರ್ಯಾರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರೋ ಅವರು ಅಲ್ಲೇ ಮಾಡಿಕೊಳ್ಳಲಿ. ಅವರ ಮೇಲೆ ಮೂಲಾಜಿಟ್ಟು ಸರ್ಕಾರಿ ಆಸ್ಪತ್ರೆ ನಡೆಸೋಕೆ ಆಗಲ್ಲ. ಅವರು ಹಾಗೇನಾದ್ರು ಮಾಡಿದ್ರೆ ಅವರಿಗೆ ಏನೇನು ಇಂಕ್ರಿಮೆಂಟ್ಸ್ ಕಟ್ ಮಾಡಿ. ಅವರ ಜೀವಮಾನದಲ್ಲಿ ಮತ್ತೆ ಸರ್ಕಾರಿ ಕೆಲಸ ಸಿಕ್ಕಬಾರದು ಹಾಗೆ ಮಾಡುತ್ತೇನೆ ಎಂದು ಶ್ರೀರಾಮುಲು ಸೂಚಿಸಿದ್ದಾರೆ.

Comments are closed.