ಕರ್ನಾಟಕ

ಜೋಡಿ ಫೋಟೋ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಪ್ರಿಯಕರ: ಹೆದರಿದ ಸಾವಿಗೆ ಶರಣಾದ ಪ್ರಿಯತಮೆ

Pinterest LinkedIn Tumblr

ವಿಜಯಪುರ: ತನ್ನ ಜತೆಗಿನ ಫೋಟೋಗಳನ್ನು ಫೇಸ್‌ಬುಕ್ ನಲ್ಲಿ ಪ್ರಿಯಕರ ಅಪಲೋಡ್ ಮಾಡಿದ್ದಾನೆ ಎಂದು ಮಾನಸಿಕವಾಗಿ ನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ.

ಸಿಂದಗಿ ತಾಲೂಕಿನ ಬೂದಿಹಾಳ ಪಿಹೆಚ್ ಗ್ರಾಮದ 23 ವರ್ಷದ ಸುಧಾರಾಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಯುವತಿಯ ಸಾವಿಗೆ ಪ್ರಿಯಕರ ಶಿವಾನಂದ ಬಿರಾದಾರ ಎಂಬಾತನ ಫೇಸ್‌ಬುಕ್ ಪ್ರಚಾರವೇ ಕಾರಣ ಎಂದು ಹೇಳಲಾಗುತ್ತಿದೆ.

ಪಿಯುಸಿ ಓದುತ್ತಿರುವಾಗಲೇ ಸುಧಾರಾಣಿ ಹಾಗೂ ಕೆರೂಟಗಿ ಗ್ರಾಮದ ಶಿವಾನಂದ ನಡುವೆ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿಗೆ ತಿರುಗಿದೆ. ಹೀಗಾಗಿ ಆಗಾಗ ಪಾರ್ಕ್‌ಗಳಲ್ಲಿ ಸುತ್ತಾಟ ಕೂಡ ನಡೆಸುತ್ತಿದ್ದರು. ಈ ವೇಳೆ ಇಬ್ಬರು ಜೊತೆಯಾಗಿ ಫೋಟೋ ಸಹ ತೆಗೆದುಕೊಂಡಿದ್ದಾರೆ.

ಮುಂದೆ ಯುವತಿ ಕೋಚಿಂಗ್ ಪಡೆಯಲೆಂದು ವಿಜಯಪುರಕ್ಕೆ ಹೋಗಿದ್ದಾಳೆ. ಅಲ್ಲಿಗೂ ಹೋಗಿ ಬರುತ್ತಿದ್ದ ಶಿವಾನಂದ ಸೆಲ್ಫಿ ಫೋಟೋಗಳನ್ನ ತೆಗೆದುಕೊಂಡಿದ್ದ. ಅವುಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿ ಪ್ರಚಾರ ಪಡೆದಿದ್ದ. ಇದರಿಂದ ಯುವತಿ ಮಾನಸಿಕವಾಗಿ ನೊಂದಿದ್ದಳು. ಈ ಕಾರಣಕ್ಕೆ ಮನೆಯಲ್ಲಿದ್ದ ಸೀಮೆಎಣ್ಣೆ ಕುಡಿದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ಘಟನೆ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.