ಕರ್ನಾಟಕ

ಇಸ್ರೋ ಅಧ್ಯಕ್ಷ ಕೆ.ಶಿವನ್ ಹೆಸರಿನಲ್ಲಿ ಯಾವುದೇ ಟ್ವಿಟ್ಟರ್ ಖಾತೆ ಇಲ್ಲ: ಇಸ್ರೋ

Pinterest LinkedIn Tumblr


ಬೆಂಗಳೂರು: ಇಸ್ರೋ ಅಧ್ಯಕ್ಷ ಕೆ.ಶಿವನ್ ಹೆಸರಿನಲ್ಲಿ ಯಾವುದೇ ಟ್ವಿಟ್ಟರ್ ಅಕೌಂಟ್ ಇಲ್ಲ ಎಂದು ಇಸ್ರೋ ಸ್ಪಷ್ಟನೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಕೆ.ಶಿವನ್ ಅವರ ಹೆಸರಿನಲ್ಲಿ ಫೇಕ್ ಅಕೌಂಟ್ ತೆರೆದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಶಿವನ್ ಹೆಸರಿನಲ್ಲಿ ಟ್ವಿಟ್ಟರ್, ಫೇಸ್ ಬುಕ್ ಅಥವಾ ವಾಟ್ಸಪ್‍ನಂತಹ ಯಾವುದೇ ಅಧಿಕೃತ ಖಾತೆಗಳು ಇಲ್ಲ. ಇಸ್ರೋ ಟ್ವಿಟ್ಟರ್‍ ನಲ್ಲಿ ಮಾಹಿತಿ ಬಂದರೆ ಮಾತ್ರ ನಂಬಿ ಎಂದು ಇಸ್ರೋ ಟ್ವೀಟ್ ಮಾಡಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಇಸ್ರೋ, ಕೈಲಾಸವಾಡಿವೊ ಶಿವನ್ ಹೆಸರಿನಲ್ಲಿ ಅನೇಕ ಫೇಕ್ ಖಾತೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಸ್ರೋ ಅಧ್ಯಕ್ಷ ಡಾ. ಕೆ.ಶಿವನ್ ಯಾವುದೇ ವೈಯಕ್ತಿಕ ಖಾತೆಗಳನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಇಸ್ರೋ ಅಧಿಕೃತ ಖಾತೆಯನ್ನು ದಯವಿಟ್ಟು ನೋಡಿ ಎಂದು ಟ್ವೀಟ್ ಮಾಡಿದೆ.

Comments are closed.