
ಮೊನ್ನೆ ಮೊನ್ನೆ ಮಂಗಳೂರು ಪೊಲೀಸ್ ಕಮೀಷನರ್ ಡಾ.ಹರ್ಷ ಬಾಲ ಬಿಚ್ಚಿದ್ರೆ ನುಗ್ಗಿ ಹೊಡಿತಿನಿ ಎಂದು ರೌಡಿಶೀಟರ್ಗಳಿಗೆ ಎಚ್ಚರಿಸಿದ ಬೆನ್ನಲ್ಲೇ, ಇದೀಗ ತುಮಕೂರಿನ ರೌಡಿಗಳಿಗೆ ಲೇಡಿ ಪೊಲೀಸ್ ಪಾರ್ವತಮ್ಮ ನೀವ್ಯಾರು ಮದುವೆಯಾಗೋಕೆ ಹೋಗಬೇಡಿ…ಆಮೇಲೆ ನಿಮ್ಮ ಹೆಂಡ್ರು ಬೇರೆಯವರ ಪಾಲಾಗಬೇಕಾಗುತ್ತೆ ಎನ್ನುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ರೌಡಿ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಯನಗರ, ತಿಲಕ್ ಪಾರ್ಕ್,ಹೊಸಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಗಳನ್ನು ಕರೆಸಿದ ಲೇಡಿ ಸಿಪಿಐ ಪಾರ್ವತಮ್ಮ ಖಡಕ್ ವಾರ್ನಿಂಗ್ ಮಾಡಿದ್ದಾರೆ. ನೀವೆಲ್ಲ ಎಷ್ಟು ಹೆಚ್ಕೋತಿರೋ ಅಷ್ಟು ನಮಗೆ ಒಳ್ಳೆಯದು. ಯಾಕಂದ್ರೆ ಕುರಿ ಕೊಬ್ಬಿದ್ರೆ ಮಾತ್ರ ಕಟುಕನಿಗೆ ಲಾಭ ಆಗೋದು…..ನಿಮ್ಮನ್ನು ಮಟ್ಟ ಹಾಕೋ ಮೂಲಕ ನಾನು ಹೆಸರು ಮಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೇ ನೀವ್ಯಾರು ಸುಮ್ನೆ ಮದುವೆ ಆಗೋಕೆ ಹೋಗಬೇಡಿ. ಆಮೇಲೆ ನಿಮ್ಮ ಹೆಂಡ್ರು ಬೇರೆಯವರ ಪಾಲಾಗಬೇಕಾಗುತ್ತದೆ. ಯಾಕಂದ್ರೆ ನೀವೆಲ್ಲ ಹೀಗೆ ರೌಡಿ ಚಟುವಟಿಕೆಯಲ್ಲಿ ತೊಡಗಿದ್ರೆ ನಾವು ನಿಮ್ಮನ್ನು ಮಟ್ಟ ಹಾಕಬೇಕಾಗುತ್ತದೆ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೇ ನಾನು ಇಲ್ಲಿ ಎಷ್ಟು ದಿನ ಇರ್ತೀನೋ ಗೊತ್ತಿಲ್ಲ. ಯಾವಾಗ ಬೇಕಾದ್ರೂ ಇಲ್ಲಿಂದ ಗಂಟು-ಮೂಟೆ ಕಟ್ಟೋಕೆ ನಾನು ರೆಡಿ ಇದೀನಿ. ಆದ್ರೆ ನಿಮ್ಗೆಲ್ಲಾ ಸರಿಯಾಗಿ ಧೂಳು ಕೊಡ್ವಿಯೇ ಇಲ್ಲಿಂದ ಹೋಗೋದು ಅಂತಾ ಸೂಪರ್ ಕಾಪ್ ಪಾರ್ವತಮ್ಮ ವಾರ್ನ್ ಮಾಡಿದ್ದು, ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Comments are closed.