
ಅದ್ಯಾಕೋ ಗೊತ್ತಿಲ್ಲ ಇತ್ತೀಚಿಗೆ ಒಂದಿಲ್ಲೊಂದು ಒಂದು ಸ್ವಾಮೀಜಿಗಳು ವಿವಾದಕ್ಕಿಡಾಗುತ್ತಲೇ ಇದ್ದಾರೆ. ಇತ್ತೀಚಿಗೆ ಬಾಗಲಕೋಟೆಯಲ್ಲಿ ಒಬ್ಬರು ವಿಚಿತ್ರ ಸ್ವಾಮೀಜಿ ಪತ್ತೆಯಾಗಿದ್ದು, ಈತ ಆರು ತಿಂಗಳು ಗಂಡಾಗಿ, ಇನ್ನಾರೂ ತಿಂಗಳು ಹೆಣ್ಣಾಗಿ ವರ್ತಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೌದು ಬಾಗಲಕೋಟೆ ಜಿಲ್ಲೆಯ ಚಂದ್ರ ಗ್ರಾಮದ ಬಳಿಯ ತ್ರಿಧಾಮಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠಾಧ್ಯಕ್ಷ ವಿದ್ಯಾಹಂಸ ಭಾರತಿ ಸ್ವಾಮೀಜಿ ಆರು ತಿಂಗಳು ಗಂಡು, ಇನ್ನಾರು ತಿಂಗಳು ಹೆಣ್ಣಂತೆ ವರ್ತಿಸ್ತಾರೆ. ಒಂದಷ್ಟು ಕಾಲ ಕಾವಿ ತೊಟ್ಟು ಸ್ವಾಮೀಜಿಯಂತೆ ನಡೆದುಕೊಳ್ಳುವ ಇವರು, ಮತ್ತಷ್ಟು ಕಾಲ ಮಹಿಳೆಯರಂತೆ ಸೀರೆ ಉಟ್ಟು ಆಭರಣ ತೊಟ್ಟು ವಿಚಿತ್ರವಾಗಿ ಭಕ್ತರಿಗೆ ದರ್ಶನ ಕೊಡ್ತಾರಂತೆ.
ಚಾತುರ್ಮಾಸ ಆಚರಿಸಲು ಮೈಸೂರಿನಿಂದ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಚಿಕ್ಕಸಂಗಮಕ್ಕೆ ಆಗಮಿಸಿದ ಈ ಸ್ವಾಮೀಜಿಯನ್ನು ಕಂಡು ಭಕ್ತರು ಚಕಿತಗೊಂಡಿದ್ದು, ಈ ರೀತಿ ವಿಚಿತ್ರವಾಗಿ ವರ್ತಿಸಿ ವಿವಾದಾತ್ಮಕವಾಗಿ ನಡೆದುಕೊಂಡಿದ್ದರಿಂದ ಚಿಕ್ಕಸಂಗಮ ಗ್ರಾಮಸ್ಥರು ಹಾಗೂ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ವಾಮೀಜಿಯನ್ನು ಗ್ರಾಮದಿಂದ ಹೊರಹಾಕಿದ್ದಾರೆ.
Comments are closed.