ಕರ್ನಾಟಕ

ಕಡ್ಲೆ ಪುರಿ ರೀತಿ ದುಡ್ಡನ್ನು ಹಂಚಿದ ಜಮೀರ್ ಅಹ್ಮದ್ ಖಾನ್​

Pinterest LinkedIn Tumblr


ಬೆಂಗಳೂರು: ಎದುರುಗಿದ್ದ ವ್ಯಕ್ತಿಗೆ ಎಲ್ಲರೆದುರೆ ಕಡ್ಲೆ ಪುರಿ ರೀತಿ ಕಂತೆ ಕಂತೆ ಹಣವನ್ನು​ ಎಣಿಸಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಂಚಿದ ಘಟನೆ ಭಾನುವಾರ ಕಂಡುಬಂದಿತು.

ನಿನ್ನೆ ನಗರದ ಗೋರಿಪಾಳ್ಯದಲ್ಲಿ ಶಾಸಕರು ಏಕ್.. ದೋ.. ತೀನ್.. ಚಾರ್.. ಅಂತ ಕಂತೆ ಕಂತೆ ಹಣವನ್ನು ಎಣಿಸಿ ಎದುರಿಗಿದ್ದ ವ್ಯಕ್ತಿಗಳ ಕೈಗೆ ಕೊಡುತ್ತಿರುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.0 ಅಷ್ಟಕ್ಕೂ ಗೋಣಿ ಚೀಲದಲ್ಲಿ ಹಣವನ್ನು ತಂದ ಶಾಸಕರು, ಚೀಲದೊಳಗೆ ಬರೋಬ್ಬರಿ 20 ಲಕ್ಷ ಹಣ ಇತ್ತು ಎಂದು ತಿಳಿದು ಬಂದಿದೆ. ಅದರಲ್ಲಿ 500 ರೂಪಾಯಿ ಮುಖ ಬೆಲೆ 9 ಲಕ್ಷ ಮೊತ್ತವಿತ್ತು ಜೊತೆಗೆ 2 ಸಾವಿರ ರೂಪಾಯಿ ಮುಖಬೆಲೆ 11 ಲಕ್ಷ ಹಣವನ್ನು ಎದುರಿಗಿದ್ದ ವ್ಯಕ್ತಿಗಳಿಗೆ ಹಂಚಿದ್ದಾರೆ.

ಇನ್ನು ಚೀಲದಲ್ಲಿ ಹಣ ತಂದು ಶಾಸಕರು ಲಕ್ಷ, ಲಕ್ಷ ಹಣವನ್ನ ಹಂಚಿದ್ದು ಯಾರಿಗೆ(?) ಯಾಕೆ(?) ರಾಜಿ ಸಂಧಾನವೋ ಅಥವಾ ಮೃತ ಕುಟುಂಬಕ್ಕೆ ಪರಿಹಾರವೋ, ಯಾಕಾಗಿ ಶಾಸಕರು ಚೀಲದಲ್ಲಿ 20 ಲಕ್ಷ ಹಣವನ್ನ ತಂದಿದ್ದರು ಎಂಬ ಹಲವು ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡಿದೆ.

ಸದ್ಯ ಜಮೀರ್ ಅಹ್ಮದ್ ಖಾನ್​​ ಅವರ ಹಿಂದೆ ಪೊಲೀಸರು ಇದ್ದರು ಬಹಿರಂಗವಾಗಿ ಶಾಸಕರು ಹಣವನ್ನು ಎದುರಿಗಿದ್ದ ವ್ಯಕ್ತಿಗೆ ಕೊಟ್ಟಿದ್ದು, ಅವರ ಜೊತೆಗೆ ಇದ್ದ ವ್ಯಕ್ತಿಯ ಹೆಸರು ಅಲ್ತಾಫ್ ಖಾನ್ ಅವರು ಎಂಬ ಮಾಹಿತಿ ತಿಳಿದು ಬಂದಿದೆ.

Comments are closed.