ಕರ್ನಾಟಕ

ಉತ್ತರ ಕರ್ನಾಟಕದಲ್ಲಿ ಪ್ರವಾಹದಲ್ಲಿ ಬಂದು ಮನೆಯ ಛಾವಣಿ ಏರಿ ಕುಳಿತ ಮೊಸಳೆ!

Pinterest LinkedIn Tumblr


ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಮಳೆ ಮತ್ತು ಪ್ರವಾಹದ ಕಾರಣದಿಂದ ಮನುಷ್ಯರು ಮಾತ್ರ ಸಂಕಷ್ಟಕ್ಕೆ ಒಳಗಾಗಿರುವುದಲ್ಲ, ವಿವಿಧ ಜಾತಿಯ ಪ್ರಾಣಿ ಪಕ್ಷಿಗಳೂ ಸಹ ಸಂಕಷ್ಟಕ್ಕೆ ಒಳಗಾಗಿವೆ ಎಂಬ ಮಾಹಿತಿ ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಕೃಷ್ಣಾ ನದಿಯಲ್ಲಿ ಕಾಣಿಸಿಕೊಂಡಿರುವ ಪ್ರವಾಹಕ್ಕೆ ಊರಿಗೆ ಊರೇ ಜಲಾವೃತಗೊಂಡಿದೆ. ಈ ಸಂದರ್ಭದಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರವಾಹದ ನೀರಿನಲ್ಲಿ ಬಂದು ಬಳಿಕ ಶೀಟ್ ಮನೆಯೊಂದರ ಛಾವಣಿಯಲ್ಲಿ ಸಿಲುಕಿಕೊಂಡ ವಿಡಿಯೋ ಒಂದು ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಸಾಕು ಪ್ರಾಣಿಗಳು ಮಾತ್ರವಲ್ಲದೇ ಜಲಚರಗಳು ಮತ್ತು ವನ್ಯಜೀವಿಗಳೂ ಸಹ ಈ ಬಾರಿಯ ಪ್ರವಾಹದಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಮನೆಯ ಛಾವಣಿಯಲ್ಲಿ ಬಾಕಿಯಾಗಿರುವ ಈ ದೊಡ್ಡ ಗಾತ್ರದ ಮೊಸಳೆಯನ್ನು ಕಂಡಾಗ ಈ ಭಾಗದಲ್ಲಿ ಪ್ರವಾಹದ ತೀವ್ರತೆ ಎಷ್ಟಿದ್ದಿರಬಹುದೆಂಬ ಅಂದಾಜು ನಮಗೆ ಉಂಟಾಗುತ್ತದೆ.

Comments are closed.