ರಾಷ್ಟ್ರೀಯ

ಪಾಕ್ ನ ಯುದ್ಧ ವಿಮಾನಗಳು ಲಡಾಖ್ ಸಮೀಪ ರವಾನೆ

Pinterest LinkedIn Tumblr


ನವದೆಹಲಿ/ಇಸ್ಲಾಮಾಬಾದ್:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಭಾರತದ ನಿರ್ಧಾರದ ವಿರುದ್ಧ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಏತನ್ಮಧ್ಯೆ ಪಾಕಿಸ್ತಾನ ಲಡಾಖ್ ಸಮೀಪ ಯುದ್ಧೋಪಕರಣಗಳನ್ನು ರವಾನಿಸತೊಡಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿ ತಿಳಿಸಿದೆ.

ಕೇಂದ್ರಾಡಳಿತ ಲಡಾಖ್ ನ ಸಮೀಪದ ಸ್ಕರ್ದು ಏರ್ ಬೇಸ್ ಗೆ ಪಾಕಿಸ್ತಾನ ವಾಯುಪಡೆ ಮೂರು ಸಿ 130 ಏರ್ ಕ್ರಾಫ್ಟ್ ಅನ್ನು ಕಳುಹಿಸಿರುವುದಾಗಿ ವರದಿ ವಿವರಿಸಿದೆ. ಪಾಕಿಸ್ತಾನದ ಚಲನವಲನ ಹಾಗೂ ಗಡಿಭಾಗದಲ್ಲಿನ ಬೆಳವಣಿಗೆ ಬಗ್ಗೆ ಭಾರತದ ಗುಪ್ತಚರ ಇಲಾಖೆ ಸೂಕ್ಷ್ಮ ಕಣ್ಗಾವಲು ಇರಿಸಿರುವುದಾಗಿ ಮೂಲಗಳು ತಿಳಿಸಿವೆ ಎಂದು ಎಎನ್ ಐ ವರದಿ ಮಾಡಿದೆ.

ಪಾಕಿಸ್ತಾನ ಸರಕಾರ ಸ್ಕರ್ದು ವಾಯು ನೆಲೆಗೆ ಜೆಎಫ್-17 ಯುದ್ಧ ವಿಮಾನವನ್ನು ಕಳುಹಿಸುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ. ಯುದ್ಧ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಏರ್ ಬೇಸ್ ನಲ್ಲಿ ಪಾಕ್ ಯುದ್ಧೋಪಕರಣಗಳನ್ನು ರವಾನಿಸುತ್ತಿರುವುದಾಗಿ ಮೂಲಗಳು ಹೇಳಿವೆ ಎಂದು ಎಎನ್ ಐ ವರದಿ ವಿವರಿಸಿದೆ.

Comments are closed.