ಕರ್ನಾಟಕ

ಸಿದ್ದರಾಮಯ್ಯನವ್ರೇ ನೀವು ಗೂಟಾ ಹೊಡ್ಕೊಂಡು ಅಲ್ಲೇ ಕೂತಿದ್ದೀರಲ್ಲಾ .?- ವಿಶ್ವನಾಥ್

Pinterest LinkedIn Tumblr


ಮೈಸೂರು: ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ನವರಿಂದಲೇ ಸರ್ಕಾರ ಪತನವಾಗಿರೋದು. ಇವ್ನು ಯಾಕೋ ಮುಖ್ಯಮಂತ್ರಿ ಥರಹ ಕಾಣ್ತಾನೆ ಇಲ್ಲ. ನಾವು ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಅಂತ ಒಪ್ಪಲ್ಲ. ಹೀಗಂತ ಪದೇ ಪದೇ ಕುಮಾರಸ್ವಾಮಿ ಅವ್ರಿಗೆ ಹೇಳ್ತಾ ಇದ್ರು. ನಮಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಅಂದ್ರು. ಇದೆಲ್ಲ ಬೆಳೆವಣಿಗೆಯೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಎಂದು ಹೇಳಿದ್ದಾರೆ.

ಸದನ ಲಘುವಾಗಿ ನಿಂದಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಸೇಲ್ ಆಗಿದ್ದಾರೆಂದು ಬಿಂಬಿಸಿದ್ರು. ಅದನ್ನ ಸದನದಲ್ಲಿ ಕುಮಾರಸ್ವಾಮಿ ವಿಷಯ ಪ್ರಸ್ತಾಪ ಮಾಡಿದ್ರು. ಮೈಸೂರಿನ ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಸಿದ್ದರಾಮಯ್ಯ ವಿರುದ್ಧ ಗುಡುಗಿದ ವಿಶ್ವನಾಥ್, ಲೋಕಸಭಾ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ರಾಜೀನಾಮೆ ಕೊಟ್ರು. ನಾನು ರಾಜ್ಯದಲ್ಲಿನ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ. ಆದರೆ ಸಿದ್ದರಾಮಯ್ಯನವ್ರೇ ನೀವು ಯಾವಾಗ ರಾಜೀನಾಮೆ ಕೊಡ್ತಿರಾ.? ಎಂದು ಪ್ರಶ್ನಿಸಿದ್ದಾರೆ.

ನೀವಿನ್ನು ಗೂಟಾ ಹೊಡ್ಕೊಂಡು ಅಲ್ಲೇ ಕೂತಿದ್ದೀರಲ್ಲಾ ಸಿದ್ದರಾಮಯ್ಯನವ್ರೇ.? ರಾಜ್ಯದ ಜನ ನಿಮಗೆ ಹೀನಾಯವಾಗಿ ಸೋಲಿಸಿದ್ರು. ಯಾರು ನಿಮಗೆ ಡಿಸಿಎಂ ಮಾಡಿದ್ರೋ, ಅವ್ರಿಗೆ ಖೆಡ್ಡಾ ತೋಡಿದ್ರು. ತುಮಕೂರಿಗೆ ಕರ್ಕೊಂಡು ಹೋಗಿ ದೇವೇಗೌಡರಿಗೆ ಖೆಡ್ಡಾ ತೋಡಿ ಬೀಳಿಸಿದ್ರು ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.