ಕರ್ನಾಟಕ

ಕಾಂಗ್ರೆಸ್‌ ನನಗೆ ಲೆಕ್ಕಕ್ಕೇ ಇಲ್ಲ!: ಅನರ್ಹ ಶಾಸಕ

Pinterest LinkedIn Tumblr


ಕಾಂಗ್ರೆಸ್ ಸರ್ಕಾರದ ವಿರುದ್ಧ ಅನರ್ಹ ಶಾಸಕ ಬಿ.ಸಿ. ಪಾಟೀಲ್ ನಾನು ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತಿಸುವುದು ಇಲ್ಲ, ಲೆಕ್ಕಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಹೌದು ಮೈತ್ರಿ ಸರ್ಕಾರ ಪತನಗೊಳ್ಳಲು ಕಾಂಗ್ರೆಸ್ ನಿಂದ ಹೊರ ನಡೆದ ಅತೃಪ್ತ ಶಾಸಕರಲ್ಲಿ ಒಬ್ಬರಾದ ಬಿಸಿ ಪಾಟೀಲ್ ರನ್ನು ಸಹ ಅತೃಪ್ತ ಶಾಸಕರ ಜೊತೆ ಅನರ್ಹಗೊಳಿಸಲಾಯಿತು. ಇನ್ನೂ ಈ ವಿಚಾರದಲ್ಲಿ ಮನನೊಂದಿರುವ ಶಾಸಕ ಬಿ.ಸಿ.ಪಾಟೀಲ್ ಭಾನುವಾರ ಸಿಎಂ ಯಡಿಯೂರಪ್ಪನವರ ಡಾಲರ್ಸ್​ ಕಾಲೋನಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.

ಸದ್ಯ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅನರ್ಹ ಶಾಸಕ ಬಿ.ಸಿ ಪಾಟೀಲ್ ನಾನು ಸಿಎಂ ರನ್ನು ಸೌಜನ್ಯಕ್ಕಾಗಿ ಭೇಟಿ ನೀಡಿದ್ದು, ತಮ್ಮ ಕ್ಷೇತ್ರ ಹಿರೇಕೆರೂರು ಅಭಿವೃದ್ಧಿ ವಿಚಾರವಾಗಿ ಮಾತನಾಡಿದ್ದೇನೆ ಹಾಗೂ ಇ ವಿಚಾರಕ್ಕೆ ಸಿಎಂ ಯಡಿಯೂರಪ್ಪರವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಂದು ತಿಳಿಸಿದ್ದಾರೆ.

ಅಲ್ಲದೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರ ವಿರುದ್ದವು ಕೆಂಡಮಂಡಲವಾಗಿ ಮಾತನಾಡಿದ್ದಾರೆ. ಮಾಇ ಸ್ಪೀಕರ್ ರಮೇಶ್ ಕುಮಾರ್ ರವರು ಕೆಲವರು ಮಾತು ಕೇಳಿ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಆದರೆ ಈ ಯಾವುದಕ್ಕೂ ನಾವು ಹೆದರುವುದಿಲ್ಲ. ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದೇವೆ. ನಮಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ. ಎಂಬ ವಿಶ್ವಾಸ ಇದೆ. ಮುಂದಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಏನು ಬೇಕಾದರೂ ಮಾಡಲಿ ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಏನೆಂಬುವುದು ಮತದಾರರಿಗೆ ತಿಳಿದಿದೆ. ಕಾಂಗ್ರೆಸ್ ರವರು ಮಾಡಿರುವ ನಮ್ಮ ಅನರ್ಹತೆಯನ್ನು ಮತದಾರರು ಅರ್ಹತೆಯನ್ನಾಗಿ ಬದಲಿಸಿ ತೋರಿಸುತ್ತಾರೆ. ಎಂಬ ನಂಬಿಕೆ ನಮಗಿದೆ ಎಂದು ಹೇಳಿದ್ದಾರೆ.

ಈಗ ರಾಜೀನಾಮೆ ಕೊಟ್ಟಿರಬಹುದು ಆದರೆ ಅದರ ಉದ್ದೇಶ ಅಭಿವೃದ್ದಿ ದೃಷ್ಟಿಯಷ್ಟೇ ಆದರೆ ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲತ್ತೇನೆ . ಅಲ್ಲದೆ ಬಿಜೆಪಿ ಪಕ್ಷಕ್ಕೆ ಸೇರುವುದನ್ನು ನನ್ನ ಕ್ಷೇತ್ರದ ಮತದಾರರ ಜೊತೆ ಚರ್ಚೆ ನಡೆಸಿ ತೀರ್ಮಾನಿಸುತ್ತೇನೆ ಎಂದು ಹೇಳಿದರು.

Comments are closed.