
ಬಳ್ಳಾರಿ: ನಾನು ಸಾಕಷ್ಟು ದೂರ ಬಂದಾಗಿದೆ, ಇನ್ನು ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರದ ಸನಿಹಕ್ಕೂ ಬರಲು ಸಾಧ್ಯವಿಲ್ಲ ಎಂದು ಮೈತ್ರಿ ಪಕ್ಷಗಳ ಪ್ರಮುಖರಿಗೆ ಮಾಜಿ ಸಚಿವ ಆನಂದಸಿಂಗ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಹೊಸಪೇಟೆಯಲ್ಲಿ ಕಾಂಗ್ರೆಸ್ ವರಿಷ್ಠ ಸಿದ್ದರಾಮಯ್ಯ ಸಂಪರ್ಕಿಸಿದ್ದ ವೇಳೆ ಮಾತನಾಡಿರುವ ಆನಂದ್ ಸಿಂಗ್, ಜಿಂದಾಲ್ಗೆ ಭೂಮಿ ಪರಬಾರೆ ಮಾಡುವುದನ್ನು ತಾವು ವಿರೋಧಿಸಿ, ಪ್ರತಿಭಟನೆ ನಡೆಸಿದರೂ ಲೆಕ್ಕಿಸದೇ ಪರಬಾರೆ ಮಾಡುವ ನಿರ್ಧಾರ ಕೈಗೊಂಡಿದ್ದರಿಂದಲೇ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾಗಿ ತಿಳಿಸಿದ್ದಾರೆ.
ಇನ್ನು ತಾವು ರಾಜೀನಾಮೆ ನೀಡಿದ ನಂತರವೂ ಸಚಿವ ಸಂಪುಟ ಉಪಸಮಿತಿಯಲ್ಲಿ ಭೂಮಿ ಪರಬಾರೆ ಮಾಡುವ ನಿರ್ಧಾರವನ್ನು ಎತ್ತಿಹಿಡಿಯುವ ನಿರ್ಣಯ ಕೈಗೊಂಡಿದ್ದರಿಂದ ತಾವು ಕ್ಷೇತ್ರದಲ್ಲೂ ತಲೆ ಎತ್ತಿ ಓಡಾಡದಂತಾಯ್ತು. ಇನ್ನು ಯಾರು ಏನೇ ಹೇಳಿದ್ರೂ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಯಾರೂ ಸಂಧಾನಕ್ಕೆ ಬರುವ ಅಗತ್ಯವೂ ಇಲ್ಲ ಎಂದು ಆನಂದ್ ಸಿಂಗ್ ಅವರು ಹೇಳಿದ್ದಾರೆ.
Comments are closed.