ಕರ್ನಾಟಕ

ರಾಜೀನಾಮೆ ನೀಡಿ ರೆಸಾರ್ಟ್ ಸೇರಿದ ನಾರಾಯಣಗೌಡರೇ ಇಲ್ಲಿ ನೋಡಿ.!

Pinterest LinkedIn Tumblr


ಮಂಡ್ಯ: ರಾಜೀನಾಮೆ ನೀಡಿ ರೆಸಾರ್ಟ್ ಸೇರಿರುವ ಶಾಸಕರು ತಮ್ಮ ಕ್ಷೇತ್ರದ ಬಗ್ಗೆ, ತಮಗೆ ಮತ ಹಾಕಿದ ಜನರ ಬಗ್ಗೆ ಚಿಂತಿಸದೇ, ಆರಾಮಾಗಿದ್ದಾರೆ. ಆದ್ರೆ ಇತ್ತ ತಮ್ಮ ಗೋಳನ್ನ ಹೇಳಿಕೊಳ್ಳಲಾಗದೇ, ಪರಿಹಾರ ಸಿಗದೇ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೇ ರೈತರು ನಿರಂತರವಾಗಿ ಸಾಯುತ್ತಿದ್ದಾರೆ. ಇಲ್ಲಿನ ಕೆ.ಆರ್.ಪೇಟೆ ತಾಲೂಕಿನ ಆಲಂಬಾಡಿ ಕಾವಲು ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ರೈತ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಜಯಮ್ಮ(63) ಆತ್ಮಹತ್ಯೆಗೆ ಶರಣಾದ ರೈತ ಮಹಿಳೆಯಾಗಿದ್ದು, ಈಕೆ ಸುಮಾರು ಎರಡು ಎಕರೆ ಜಮೀನು ಹೊಂದಿದ್ದಳು. ಬ್ಯಾಂಕ್ ಮತ್ತು ಖಾಸಗಿಯಾಗಿ ಸುಮಾರು 5 ಲಕ್ಷ ಸಾಲ ಮಾಡಿಕೊಂಡಿದ್ದಳು.

ಕೊಳವೆ ಬಾವಿ ಕೊರೆಸಿದ್ದು ನೀರು ಕಡಿಮೆಯಾಗಿತ್ತು. ಹೇಮಾವತಿ ನಾಲೆಯಲ್ಲಿ ನೀರು ಬರದ ಕಾರಣ ಈಕೆಗೆ ಸಮೃದ್ಧ ಬೆಳೆ ಬೆಳೆಯಲು ಕಷ್ಟವಾಗಿತ್ತು. ಹೇಮಾವತಿ ಅಣೆಕಟ್ಟೆಯಿಂದಲೂ ನೀರು ಬರದ ಕಾರಣ ಜಯಮ್ಮ ಬೆಳೆ ಹಾಕಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಳು. ಈ ಹಿನ್ನೆಲೆ ಜಯಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಚಿಕಿತ್ಸೆ ಫಲಕಾರಿಯಾಗದೇ ಜಯಮ್ಮ ಸಾವನ್ನಪ್ಪಿದ್ದಾಳೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ. ಶಾಸಕ ನಾರಾಯಣಗೌಡರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.