ಕರ್ನಾಟಕ

ಶಾಸಕ ಶ್ರೀಮಂತ್ ಪಾಟೀಲ್ ನಾಪತ್ತೆಯಾಗಿರುವ ಬಗ್ಗೆ ವಿಧಾನಸಭೆಯಲ್ಲಿ ಕಲಹ, ವಾಕ್ಸಮರ…. ಕಲಾಪ ಮುಂದೂಡಿದ ಸ್ಪೀಕರ್‌

Pinterest LinkedIn Tumblr

ವಿಧಾನಸಭೆಯಲ್ಲಿ ಚರ್ಚೆ ಮುಂದುವರಿದಿದ್ದು, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ರೆಸಾರ್ಟ್‌ನಿಂದ ನಾಪತ್ತೆಯಾಗಿರುವ ಬಗ್ಗೆ ವಾಕ್ಸಮರ ನಡೆಯಿತು. ದೋಸ್ತಿ ಸರಕಾರದ ಸದಸ್ಯರು ಹಾಗೂ ಬಿಜೆಪಿ ನಾಯಕರನ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ಶ್ರೀಮಂತ ಪಾಟೀಲ್‌ ಅವರು ಸದನಕ್ಕೆ ಬರುವುದಿಲ್ಲ ಎಂದು ಲೆಟರ್‌ ಹೆಡ್‌ ಇಲ್ಲದ ಪತ್ರ ರವಾನಿಸಿದ್ದಾರೆ. ಈ ದಾಖಲೆಗಳು ಸತ್ಯವೇ ಎಂಬುದು ಅನುಮಾನ ಮೂಡುತ್ತದೆ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿದರಲ್ಲದೆ, ಶುಕ್ರವಾರದೊಳಗಾಗಿ ಈ ಬಗ್ಗೆ ವಿವರ ನೀಡುವಂತೆ ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ.

ಅನಗತ್ಯ ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಮೊದಲು ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಬಿಜೆಪಿ ನಾಯಕರು ಬಿಗಿಪಟ್ಟು ಹಿಡಿದರು. ಈ ವೇಳೆ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಹೀಗಾಗಿ ಸ್ಪೀಕರ್‌ ರಮೇಶ್‌ ಕುಮಾರ್ ಕಲಾಪವನ್ನು ಅರ್ಧ ಗಂಟೆಗಳ ಕಾಲ ಮುಂದೂಡಿದರು.

ಅನಾರೋಗ್ಯ ಪೀಡಿತರಾಗಿರುವ ಶ್ರೀಮಂತ ಪಾಟೀಲ್‌ ಅದು ಹೇಗೆ ಬೆಂಗಳೂರಿನಿಂದ ಚೆನ್ನೈಗೆ ಹಾಗೂ ಅಲ್ಲಿಂದ ಮುಂಬಯಿಗೆ ತೆರಳಿ ಆಸ್ಪತ್ರೆ ಸೇರಿದರು. ಇದರಲ್ಲಿ ಬಿಜೆಪಿಯವರ ಕೈವಾಡ ಇದೆ ಎಂದು ದಿನೇಶ್‌ ಗುಂಡೂರಾವ್‌ ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ-ಕಾಂಗ್ರೆಸ್‌-ಜೆಡಿಎಸ್‌ ನಡುವೆ ಮಾತಿನ ಚಕಮಕಿ ನಡೆಯಿತು.

Comments are closed.