ಕರ್ನಾಟಕ

ನಮ್ಮ ಪಕ್ಷದ ಶಾಸಕ ಶ್ರೀಮಂತ್ ಪಾಟೀಲ್’ರನ್ನು ಅಪಹರಿಸಲಾಗಿದೆ: ಡಿ.ಕೆ. ಶಿವಕುಮಾರ್

Pinterest LinkedIn Tumblr

ಬೆಂಗಳೂರು: ಕಾಗವಾಡ ಶಾಸಕ ಶ್ರೀಮಂತ್​ ​ ಪಾಟೀಲ್​ ಅವನ್ನು ಬಿಜೆಪಿಯ ಅವರು ಅಪಹರಿಸಿ, ಮುಂಬೈ ಆಸ್ಪತ್ರೆಯಲ್ಲಿ ಬಲವಂತವಾಗಿ ದಾಖಲು ಮಾಡಿದ್ದಾರೆ. ಆರೋಗ್ಯವಾಗಿದ್ದೇನೆ ಎಂದು ಹೇಳಿದರೂ ಬಿಡದೆ ಮಾಜಿ ಶಾಸಕ ಲಕ್ಷ್ಮಣ್​ ಸವದಿ ಮೂಲಕ ಅಪಹರಿಸಲಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್​ ಸದನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಪುನಾರಂಭಗೊಳ್ಳುತ್ತಲೇ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ್​ ಪಾಟೀಲ್​ ಅವರ ಭಾವಚಿತ್ರ, ಇಂಡಿಗೋ ವಿಮಾನದಲ್ಲಿ ಶ್ರೀಮಂತ್​ ಪಾಟೀಲ್​ ಮತ್ತು ಲಕ್ಷ್ಮಣ್​ ಸವದಿ ಒಟ್ಟಾಗಿ ಪ್ರಯಾಣಿಸಿದ ಟಿಕೆಟ್​ನ ಚಿತ್ರಗಳನ್ನು ಸದನದಲ್ಲಿ ಪ್ರದರ್ಶಿಸಿದರು. ಜತೆಗೆ ಕಾಂಗ್ರೆಸ್​ ಶಾಸಕರಿಗೆ ಅಗತ್ಯ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.

ಕುರ್ಚಿ ಆಸೆಗಾಗಿ ನಮ್ಮ ಶಾಸಕರನ್ನು ಏಕೆ ಅಪಹರಿಸುತ್ತಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸದನದಲ್ಲಿ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು. ಇದಕ್ಕೆ ಗೋವಿಂದರಾಜನಗರ ಶಾಸಕ ಬಿಜೆಪಿಯ ವಿ. ಸೋಮಣ್ಣ ಆಕ್ಷೇಪಿಸಿದಾಗ ಕಲಾಪದಲ್ಲಿ ಭಾರಿ ಗದ್ದಲ ಉಂಟಾಯಿತು.

Comments are closed.