ವಿಶ್ವಾಸಮತಯಾಚನೆಗೆ ಕ್ಷಣಗಣನೆ ಆರಂಭವಾಗಿದ್ದರೂ ರಾಜ್ಯದಲ್ಲಿ ರಾಜಕೀಯ ಆಟ ಮುಗಿದಿಲ್ಲ. ಹೌದು ಸುಪ್ರೀಂ ಕೋರ್ಟ್ ಅತೃಪ್ತರು ಅಧಿವೇಶನಕ್ಕೆ ಹಾಜರಾಗಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಆದೇಶಿಸಿದ ಬೆನ್ನಲ್ಲೇ, ಅತೃಪ್ತರ ಅಮಾನತ್ತಿಗೆ ಮೈತ್ರಿ ನಾಯಕರು ಪಟ್ಟು ಹಿಡಿದಿದ್ದಾರೆ.
ಹೊಟೇಲ್ನಲ್ಲಿ ಭರ್ಜರಿ ಸಭೆ ನಡೆಸಿದ ಬಳಿಕ ಸ್ಪೀಕರ್ ಕಚೇರಿಗೆ ತೆರಳಿದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ಧರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ್ ಸೇರಿದಂತೆ ಮೈತ್ರಿ ನಾಯಕರು ನಾಳೆ ಅಧಿವೇಶನಕ್ಕೂ ಮುನ್ನವೇ 15 ಅತೃಪ್ತ ಶಾಸಕರನ್ನು ಅಮಾನತ್ತುಗೊಳಿಸುವಂತೆ ಸ್ಪೀಕರ್ಗೆ ಮನವಿ ಮಾಡಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್.ಶಂಕರ್ ಸೇರಿದಂತೆ ಎಲ್ಲರನ್ನು ಅನರ್ಹಗೊಳಿಸುವಂತೆ ನಾಯಕರು ಮನವಿ ಮಾಡಿದ್ದಾರೆ. ಅಲ್ಲದೇ ಅತೃಪ್ತ ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ರಮೇಶ್ ಜಾರಕಿಹೊಳಿಯವರನ್ನು ಇಂದು ಸಂಜೆಯೇ ಅನರ್ಹಗೊಳಿಸುವಂತೆ ದೋಸ್ತಿ ನಾಯಕರು ಒತ್ತಾಯಿಸಿದ್ದಾರೆ.
ಒಂದೊಮ್ಮೆ ಈ ನಾಯಕರು ಅನರ್ಹಗೊಂಡಲ್ಲಿ, ಮುಂದಿನ 6 ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ. ಶಾಸಕ ಅಥವಾ ಸಂಸದ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ. ಅಷ್ಟೇ ಅಲ್ಲ, 6 ವರ್ಷ ಸಚಿವ ಹಾಗೂ ನಿಗಮ ಮಂಡಳಿಯಲ್ಲೂ ಅಧಿಕಾರ ಪಡೆಯುವಂತಿಲ್ಲ. ಹೀಗಾಗಿ ಅತೃಪ್ತಿ ಹೊತ್ತು ಮುಂಬೈ ಸೇರಿ ಸರ್ಕಾರಕ್ಕೆ ಸಂಕಷ್ಟ ತಂದಿರುವ ಶಾಸಕರಿಗೆ ಪಾಠ ಕಲಿಸಲು ಸಮ್ಮಿಶ್ರ ಸರ್ಕಾರದ ನಾಯಕರು ಮಹಾಪ್ಲ್ಯಾನ್ ಮಾಡಿದ್ದಾರೆ.
Comments are closed.