
ರಾಜ್ಯ ರಾಜಕೀಯದಲ್ಲಿ ಸಮ್ಮಿಶ್ರ ಸರ್ಕಾರ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿದ್ದು ಸದ್ಯ ಮುಂಬೈ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನೂ ರಾಜ್ಯದ ಜನತೆ ಸರ್ಕಾರ ಉಳಿಯುತ್ತಾ? ಬೀಳುತ್ತಾ ಎಂದು ಕುತೂಹಲದಿಂದ ಕಾಯುತ್ತಿದ್ದರೆ, ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ‘ನೋಡ್ತಾ ಇರಿ,ಅತೃಪ್ತರಿಗೆ ಬಿಜೆಪಿ ಕಚೇರಿ ಎದುರು ಟಿಕೆಟ್‌ಗೆ ಬೇಡುವ ಸ್ಥಿತಿ ಬರುತ್ತೆ’ ಎಂದು ಅತೃಪ್ತ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ದಿನೇಶ್ ಗುಂಡೂರಾವ್ ಹೀಗೆ ಹೇಳಿದ್ದಾದರೂ ಏಕೆ ಅಂತೀರಾ ಹಾಗಾದರೆ ಈ ಕೆಳಗಿನ ಸ್ಟೋರಿ ಓದಿ..
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತೃಪ್ತ ಶಾಸಕರು ಅನರ್ಹರಾಗ ಬೇಕೆಂಬ ದುರುದ್ದೇಶ ಬಿಜೆಪಿ ನಾಯಕರಿಗೆ ಇದೆ. ಕಾಂಗ್ರೆಸ್ ಶಾಸಕ ಎಂ.ಟಿ.ಬಿ. ನಾಗರಾಜ್ ಮುಂಬೈಗೆ ಹೋಗುವಾಗ ಅವರ ಜೊತೆ ಬಿಜೆಪಿ ನಾಯಕರಾದ ಯಡಿಯೂರಪ್ಪ ಅವರ ಪುತ್ರ ಮತ್ತು ಆರ್.ಅಶೋಕ್ ಹೋಗಿದ್ದೇಕೆ? ಎಂದು ಪ್ರಶ್ನೆ ಮಾಡುತ್ತಾ, ಈ ರೀತಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡರೆ ಅದು ಅನರ್ಹತೆಗೆ ಅವಕಾಶ ನೀಡಿದಂತೆ ಆಗುತ್ತದೆ. ಬಿಜೆಪಿಯವರ ಈ ತಂತ್ರವನ್ನು ಅತೃಪ್ತ ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂಬ ಕಿವಿಮಾತನ್ನು ಹೇಳಿದ್ದಾರೆ.
ಅತೃಪ್ತ ಶಾಸಕರು ಕೇವಲ ಶಾಸಕರಲ್ಲ ನಮ್ಮ ಆಪ್ತ ಸ್ನೇಹಿತರು ಬಹಳ ವರ್ಷಗಳಿಂದ ಅವರು ನಮ್ಮೊಂದಿಗೆ ಅನ್ಯೋನ್ಯತೆಯಿಂದ ಇದ್ದಾರೆ. ಅತೃಪ್ತ ಶಾಸಕರ ರಾಜೀನಾಮೆಯಿಂದ ಸರ್ಕಾರ ಬಿದ್ದು ಹೋಗಬಹುದು. ಆದರೆ, ಅತೃಪ್ತರು ಅನರ್ಹಗೊಂಡರೆ ಮಂತ್ರಿಗಳಾಗಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಅನರ್ಹಗೊಳಿಸಿ ತಾವು ಅಧಿಕಾರ ಹಿಡಿಯಲು ಬಿಜೆಪಿ ಸಂಚು ರೂಪಿಸಿದೆ. ಇದು ಶಾಸಕರಿಗೆ ಅರ್ಥವಾಗುತ್ತಿಲ್ಲ. ಶಾಸಕರನ್ನು ಅನರ್ಹಗೊಳಿಸಲು ನಮಗೂ ಇಷ್ಟವಿಲ್ಲ. ವಾಪಸ್ ಬಂದು ರಾಜೀನಾಮೆ ವಾಪಸ್ ಪಡೆದರೆ ಅನರ್ಹತೆ ಭೀತಿ ತಪ್ಪುತ್ತದೆ. ಸರ್ಕಾರದಲ್ಲಿ ಸೂಕ್ತ ಸ್ಥಾನಮಾನವೂ ಸಿಗುತ್ತದೆ. ಎಂದು ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
Comments are closed.