ರಾಷ್ಟ್ರೀಯ

ಪಾಕ್​ ನೆಲೆಯಲ್ಲಿ ಭಾರತೀಯ ವಿಮಾನ ಹಾರಾಟಕ್ಕೆ ಅಸ್ತು

Pinterest LinkedIn Tumblr


ನವದೆಹಲಿ: ಫೆಬ್ರವರಿಯಲ್ಲಿ ಬಾಲಕೋಟ್ ವಾಯುದಾಳಿಯ ಬಳಿಕ ಪಾಕಿಸ್ತಾನದ ವಾಯುಪ್ರದೇಶಗಳಲ್ಲಿ ಭಾರತೀಯ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿತು ಇದನ್ನು ಪಾಕ್​ ಇಂದು ಪರಿಣಾಮಕಾರಿ ತೆಗೆದು ಹಾಕಲಾಗಿದೆ ಎಂದು ಸುದ್ದಿಯ ಮೂಲಗಳು ತಿಳಿಸಿವೆ.

ಮಂಗಳವಾರ ಬೆಳಗ್ಗೆಯಿಂದಲೇ ವಿಮಾನ ಹಾರಾಟ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಪಾಕಿಸ್ತಾನದ ವಾಯುಪ್ರದೇಶವನ್ನು ಮುಚ್ಚಿದ ಕಾರಣ ತನ್ನ ವಿವಿಧ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಮರು ಮಾರ್ಗಕ್ಕಾಗಿ ಸುಮಾರು 491 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ ಎಂದು ಹೇಳಲಾಗಿದೆ.

ಇಂದು ಮುಂಜಾನೆ 12.41 ಗಂಟೆಯಿಂದ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶದ ಮೂಲಕ ಹಾರಲು ಪಾಕಿಸ್ತಾನ ಅನುಮತಿ ನೀಡಿದೆ. ಭಾರತೀಯ ವಿಮಾನಯಾನ ನಿರ್ವಾಹಕರು ಶೀಘ್ರದಲ್ಲೇ ಪಾಕಿಸ್ತಾನ ವಾಯುಪ್ರದೇಶದ ಮೂಲಕ ಸಾಮಾನ್ಯ ಮಾರ್ಗಗಳನ್ನು ಬಳಸಲು ಪ್ರಾರಂಭಿಸುತ್ತಾರೆ ಎಂಬ ಮಾಹಿತಿಯನ್ನು ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ.

ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರವು ಭಾರತೀಯ ಕಾಲಮಾನ 12.41ರ ಸುಮಾರಿಗೆ ವಾಯುಪಡೆಗೆ (ನೋಟಾಮ್) ನೋಟಿಸ್ ನೀಡಿದ್ದು, ಎಟಿಎಸ್ (ವಾಯು ಸಂಚಾರ ಸೇವೆ) ಮಾರ್ಗಗಳಲ್ಲಿ ಎಲ್ಲಾ ರೀತಿಯ ನಾಗರಿಕ ಸಂಚಾರಕ್ಕೆ ತಕ್ಷಣದಿಂದಲೇ ಪಾಕಿಸ್ತಾನದ ವಾಯುಪ್ರದೇಶವು ತೆರೆದಿರುತ್ತದೆ” ಎಂದು ತಿಳಿಸಿದೆ.

Comments are closed.