ಕರ್ನಾಟಕ

ಇಳಿಕೆ ಕಂಡ ಬಂಗಾರದ ಬೆಲೆ ; ಬೆಂಗಳೂರಿನಲ್ಲಿ ಬಂಗಾರಕ್ಕೆ ಎಷ್ಟಿದೆ ನೋಡಿ…

Pinterest LinkedIn Tumblr

ಹೊಸದಿಲ್ಲಿ: ಬಂಗಾರದ ಬೆಲೆ ಮತ್ತೆ ಇಳಿಮುಖವಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ ಬೆಲೆ ₹ 3050ರಷ್ಟಿದೆ. ಆಭರಣ ಮಾರಾಟಗಾರರು, ರೀಟೇಲ್ ಮಾರಾಟಗಾರರಿಂದ ಅಷ್ಟಾಗಿ ಬೇಡಿಕೆ ಇಲ್ಲದಿರುವ ಕಾರಣ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ.

ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಗ್ಲೋಬಲ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್‌ಗೆ ಶೇ.0.20ರಷ್ಟು ಏರಿಕೆಯಾಗಿದ್ದು 1,333.95 ಡಾಲರ್ ತಲುಪಿದೆ. ಬೆಳ್ಳಿ ಬೆಲೆ ಔನ್ಸ್‌ಗೆ ಶೇ.0.15ರಷ್ಟು ಹೆಚ್ಚಾಗಿ 14.76 ಡಾಲರ್‌ಗಳಷ್ಟಿದೆ.

ದಿಲ್ಲಿಯಲ್ಲಿ 10 ಗ್ರಾಂಗಳ 24 ಕ್ಯಾರೆಟ್ 10 ಗ್ರಾಂ ಬಂಗಾರದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ₹ 32,920 ರಲ್ಲಿ ಸ್ಥಿರವಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಸಹ ಸ್ಥಿರವಾಗಿದ್ದು ₹ 31,800 ರಲ್ಲಿ ಮುಂದುವರೆದಿದೆ. ಇನ್ನು ಕೆ.ಜಿ ಬೆಳ್ಳಿ ಬೆಲೆ ₹ 10ರಷ್ಟು ಕಡಿಮೆಯಾಗಿದ್ದು ₹ 39,850ಗೆ ತಲುಪಿದೆ.

ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿ ಬೆಲೆ ₹ 39600ರಷ್ಟಿದ್ದು 100 ಗ್ರಾಂ ಬೆಲೆ ₹ 3960ರಷ್ಟಾಗುತ್ತದೆ. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ.

Comments are closed.