ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ಉತ್ತರ ಪ್ರದೇಶ ಬಾರ್ ಕೌನ್ಸಿಲ್ ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದ ದರ್ವೇಶ್ ಯಾದವ್ ತಮ್ಮ ಸಹೋದ್ಯೋಗಿಗಳಿಂದಲೇ ಗುಂಡೇಟು ತಿಂದು ಸಾವಿಗೀಡಾಗಿದ್ದಾರೆ.
ಆಗ್ರಾ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಘಟನೆಯಲ್ಲಿ ಅಡ್ವೋಕೇಟ್ ಅರವಿಂದ್ ಕುಮಾರ್ ಮಿಶ್ರಾ ಅವರ ಕೋಣೆಯಲ್ಲಿ ಯಾದವ್ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆದಿದೆ.
ಇನ್ನು ಮಿಶ್ರಾ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಆರೋಪಿ ಅಡ್ವೋಕೇಟ್ ಮನೀಶ್ ಶರ್ಮಾ ಕಡೆಗೆ ತಾವೂ ಸ್ವಯಂ ಗುಂಡು ಹಾರಿಸಿಕೊಂಡಿದ್ದಾರೆ.
ಕೇವಲ ಎರಡು ದಿನಗಳ ಹಿಂದಷ್ತೇ ದರ್ವೇಶ್ ಯಾದವ್ ಬಾರ್ ಕೌನ್ಸಿಲ್ ಹುದ್ದೆಗೆ ಆಯ್ಕೆಯಾಗಿದ್ದರು. ಅವಧ್ ಬಾರ್ ಅಸೋಸಿಯೇಷನ್ ಈ ಘಟನೆಯನ್ನು ಖಂಡಿಸಿದ್ದು ನಾಳೆ ಪ್ರತಿಭಟನೆಯಾಗಿ ತಾವು ಕೆಲಸದಿಂದ ದೂರವಿರಲು ತೀರ್ಮಾನಿಸಿದ್ದಾರೆ ಎಂದು ಮಾದ್ಯಮ ವರದಿ ಹೇಳಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.