ಕರ್ನಾಟಕ

ಸೋತೆ ಎಂದು ಬಳ್ಳಾರಿಯಿಂದ ಪಲಾಯನ ಮಾಡುವುದಿಲ್ಲ: ಉಗ್ರಪ್ಪ

Pinterest LinkedIn Tumblr


ಬಳ್ಳಾರಿ: ಚುನಾವಣೆಯಲ್ಲಿ ಸೋಲು ಗೆಲುವು ಸಹಜ ಇದನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ಸೋತೆ ಅಂತ ಓಡಿ ಹೋಗಲ್ಲ ಬಳ್ಳಾರಿಯಲ್ಲೇ ಇರ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಹೇಳಿದರು.

ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನನಗೆ ಹಾಗೂ ಪಕ್ಷಕ್ಕೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದಗಳು, ಗೆದ್ದವರು ಅಭಿವೃದ್ದಿಗೆ ಶ್ರಮಿಸಲಿ, ಅದಕ್ಕೆ ನಾನು ಒಬ್ಬ ಕಾರ್ಯಕರ್ತನಾಗಿ ಸಹಕರಿಸುತ್ತೇನೆ ಎಂದರು.

ಉಪಚುನಾವಣೆಯಲ್ಲಿ ಗೆದ್ದಿದ್ದೆ, ಗೆದ್ದು ಕೆಲಸ ಮಾಡಿದ್ದು ನನಗೆ ತೃಪ್ತಿ ಇದೆ. ಈ ಬಾರಿ ಜನ ಯಾಕೆ ಈ ತೀರ್ಮಾನ ಕೊಟ್ರು ಅನ್ನೋದು ನನಗೆ ತಿಳಿಯುತ್ತಿಲ್ಲ, ನಾವೆಲ್ಲ ಸಕ್ರಿಯವಾಗಿ ಕೆಲಸ ಮಾಡಿದ್ದೇವೆ. ಪಕ್ಷ ಎಂದರೇ ತಾಯಿ ಇದ್ದ ಹಾಗೆ. ಅದಕ್ಕೆ ದ್ರೋಹ ಬಗೆಬಾರದು. ನಾನು ವಿಶ್ಲೇಷಣೆ ಮಾಡುವ ಸ್ಥಿತಿಯಲ್ಲಿ ಇಲ್ಲ, ನಾನು ಎಡವಿರುವ ಹಾಗೆ ಕಾಣಿಸುತ್ತಿದೆ. ಈ ರೀತಿ ಜನಬೆಂಬಲ ನೋಡಿದರೆ ದೇಶವ್ಯಾಪಿ ಮೋದಿ ಅಲೆ ಇದ್ದದ್ದು ಕಂಡು ಬರ್ತಾ ಇದೆ. ಸರಿನೋ ತಪ್ಪೋ ಅವರಿಗಂತೂ ಜನಬೆಂಬಲ ಸಿಕ್ಕಿದೆ ಎಂದು ಹೇಳಿದರು.

ನಾನು ತಾಂತ್ರಿಕ ತಜ್ಞ ಅಲ್ಲ, ಈ ಬಗ್ಗೆ ನಮ್ಮ ರಾಷ್ಟ್ರ ನಾಯಕರು ಮಾತಾಡ್ತಾರೆ. ನಮ್ಮಲ್ಲಿ ಅವರವರ ಕೆಲಸ ಮಾಡಿದ್ದಾರೆ
ನಾನು ಚುನಾವಣೆ ವೇಳೆ ಒಂಟಿ ಆಗಿಲ್ಲ, ಬಹುತೇಕ ಎಲ್ಲ ಶಾಸಕರೂ ಕೆಲಸ ಮಾಡಿದ್ದಾರೆ. ಸೋಲು ಕಂಡಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅಳಿವು ಉಳಿವಿನ ಬಗ್ಗೆ ಮಾತಾಡಲ್ಲ, ವಾಮಮಾರ್ಗಗಳಿಂದ ರಾಜ್ಯ ಸರ್ಕಾರವನ್ನು ಉರುಳಿಸೋ ಕೆಲಸ ಮಾಡ್ತಿದ್ದಾರೆ. ಇದನ್ನು ಜನ ಅರ್ಥ ಮಾಡ್ಕೋಬೇಕು ಎಂದು ಉಗ್ರಪ್ಪ ನುಡಿದರು.

Comments are closed.