ಕರ್ನಾಟಕ

ಕೋಳಿಗೆ ಟಿಕೆಟ್ ನೀಡಿದ್ದಕ್ಕೆ ಕೋಳಿಯನ್ನು ಕೂರಿಸಿದ ಮಾಲೀಕ

Pinterest LinkedIn Tumblr

ಕೋಲಾರ: ಕೆಎಸ್‍ಆರ್ ಟಿಸಿ ಬಸ್ ನಲ್ಲಿ ಕೋಳಿಗೆ ನಿರ್ವಾಹಕ ಟಿಕೆಟ್ ನೀಡಿದ್ದಾರೆ.

ಜಿಲ್ಲೆಯ ಮುಳಬಾಗಲು ಘಟಕದ ಸರ್ಕಾರಿ ಬಸ್ ನಲ್ಲಿ ಕೋಲಾರದಿಂದ ಎಚ್. ಕ್ರಾಸ್ ಗೆ ಹೋಗುವ ಪ್ರಯಾಣಿಕ ತನ್ನ ಜೊತೆ ಕೋಳಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಿರ್ವಾಹಕ ಕೋಳಿಗೂ 15 ರೂ. ಟಿಕೆಟ್ ನೀಡಿದ್ದಾರೆ. ಟಿಕೆಟ್ ಪಡೆದ ಮಾಲೀಕ ಕೋಳಿಯನ್ನು ಸೀಟ್ ಮೇಲೆಯೇ ಕೂರಿಸಿ ಪ್ರಯಾಣಿಸಿದ್ದಾನೆ.

ಪ್ರಯಾಣಿಕರು ಕೋಳಿಯನ್ನು ತೆಗೆದು ಸೀಟ್ ಬಿಟ್ಟು ಕೊಡಿ ಎಂದು ಕೇಳಿದಾಗ, ನಾನು ಟಿಕೆಟ್ ಪಡೆದಿದ್ದೇನೆ. ಹಾಗಾಗಿ ಕೋಳಿಯೂ ನನ್ನ ಜೊತೆ ಸೀಟ್ ನಲ್ಲಿಯೇ ಕುಳಿತು ಬರಲಿದೆ ಎಂದು ವಾದಿಸಿದ್ದಾನೆ. ಸದ್ಯ ಕೋಳಿಯ ಟಿಕೆಟ್ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಕೂಡುರಸ್ತೆಯಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕ ತನಗೆ ಮಾತ್ರ ಟಿಕೆಟ್ ಪಡೆದಿದ್ದ, ಆದ್ರೆ ತನ್ನ ಜೊತೆ ಕರೆದುಕೊಂಡು ಬಂದಿದ್ದ ಕೋಳಿಗಳಿಗೆ ಕಂಡಕ್ಟರ್ ಬಳಿ ಟಿಕೆಟ್ ಪಡೆದಿರಲಿಲ್ಲ. ಈ ವೇಳೆ ಬಸ್ ತಪಾಸಣೆಗೆ ಬಂದ ತನಿಖಾಧಿಕಾರಿಗಳು ಕೋಳಿಗಳಿಗೆ ಅರ್ಧ ಟಿಕೆಟ್ ಪಡೆಯದಕ್ಕೆ ಪ್ರಯಾಣಿಕನಿಗೆ ಭರ್ತಿ 500 ರೂ. ದಂಡ ಹಾಕಿದ್ದರು. ಒಂದೊಂದು ಕೋಳಿಗೆ ಮಂಗಳೂರಿನವರೆಗೂ ಬಸ್ಸಿನಲ್ಲಿ ಪ್ರಯಾಣಿಸಲು 78. ರೂ ಟಿಕೆಟ್ ಪಡೆಯಬೇಕಾಗಿತ್ತು. ಆದ್ರೆ ಈಗ 78ರ ಬದಲು 500 ರೂ. ಪ್ರಯಾಣಿಕ ದಂಡ ಕಟ್ಟಿದ್ದ.

Comments are closed.