ಕಲಬುರಗಿ: ಹಾವಿನದ್ದು 12 ವರ್ಷದ ದ್ವೇಷವಾದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಜೆಡಿಎಸ್ ಮೇಲೆ 40 ವರ್ಷದ ದ್ವೇಷ , ಅದನ್ನುಅವರು ತೀರಿಸಿಕೊಳ್ಳುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್ .ಅಶೋಕ್ ಹೇಳಿಕೆ ನೀಡಿದ್ದಾರೆ.
ಚಿಂಚೋಳಿಯಲ್ಲಿ ಮಾತನಾಡಿದ ಅವರು,ಈಗ ಕಾಂಗ್ರೆಸ್‌ನ ಕೀಲು ಗೊಂಬೆಗಳು ಮಾತಾಡುತ್ತಿವೆ. ಸಿದ್ದರಾಮ್ಯ ಅವರು ಕೀ ಕೊಟ್ಟಿದ್ದಾರೆ, ಗೊಂಬೆಗಳು ಮಾತನಾಡುತ್ತಿವೆ ಎಂದರು.
ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರ ಬೀಳಿಸುವ ಯೋಚನೆ ಮಾಡುವುದಿಲ್ಲ.ಆ ಕೆಲಸಕ್ಕೆ ಕೈ ಹಾಕುವುದು ಇಲ್ಲ. ಸಿದ್ದರಾಮಯ್ಯ
ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ, ಅದು ಯಾವಾಗ ಸಿಡಿಯುತ್ತದೆ ಗೊತ್ತಿಲ್ಲ ಎಂದರು.
ಜೆಡಿಎಸ್ ಮೇಲೆ ಸಿದ್ದರಾಮಯ್ಯನವರದ್ದು 40 ವರ್ಷದ ದ್ವೇಷ
ಅವರನ್ನು ಕತ್ತು ಹಿಡಿದು ಮೈಸೂರು ಡಬಲ್ ರೋಡ್‌ಗೆ ಬಿಸಾಡಿ ಬಿಟ್ರಲ್ಲ . ಆ ದ್ವೇಷ ಅವರು ತೀರಿಸಿಕೊಳ್ಳುತ್ತಾರೆ ಎಂದರು.