ಕರ್ನಾಟಕ

ನನ್ನ ಹೆಂಡತಿ ಮತ ಚಲಾಯಿಸುತ್ತಿದ್ದರು ಅದಕ್ಕೆ ನಾನು ಬೂತ್​​ನಲ್ಲಿ ಇದ್ದೆ ಎಂದು ರೇವಣ್ಣ ನೆಪ: ಎ. ಮಂಜು

Pinterest LinkedIn Tumblr


ಹಾಸನ: ಸಂಜೆ 5 ಗಂಟೆಯ ತನಕ ಶೇ. 65ರಷ್ಟು ಮತದಾನವಾಗಿದೆ ಆದರೆ, ಉಳಿದ ಒಂದು ಗಂಟೆಯಲ್ಲಿ ಶೇ.20ರಷ್ಟು ಮತದಾನ ಆಗಿದೆ ಎಂದು ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ಮಂಜು ತಿಳಿಸಿದ್ದಾರೆ.

ಹಾಸನದಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊಳೆನರಸೀಪುರ, ಶ್ರಾವಣ ಬೆಳಗೊಳದ ಕೆಲ ಬೂತ್​​ಗಳಲ್ಲಿ ಅತೀ ಹೆಚ್ಚು ಮತದಾನವಾಗಿದೆ. ಬೂತ್ ನಂಬರ್ 79 ಸಿಂಗೇನಹಳ್ಳಿಯಲ್ಲಿ ಶೇ.151ರಷ್ಟು ಆಗಿದ್ದು ಹೇಗೆ(?) ಇದರ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಇದಕ್ಕೆ ಅಧಿಕಾರಿಗಳು ಉತ್ತರ ಕೊಡಬೇಕು ಎಂದರು.

ಏಜೆಂಟ್ ಇರಲಿ, ಬಿಡಲಿ ಇದಕ್ಕೆ ಚುನಾವಣೆ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಬೇಕು. ಸಚಿವ ಹೆಚ್.ಡಿ ರೇವಣ್ಣ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಎ.ಮಂಜು ಗಂಭೀರ ಆರೋಪ ಮಾಡಿದ್ದಾರೆ.

ಅವರ ತಪ್ಪು ಮುಚ್ಚಿಕೊಳ್ಳುವುದಕ್ಕೆ, ನನ್ನ ಹೆಂಡತಿ ವೋಟು ಹಾಕುತ್ತಿದ್ದರು ಅದಕ್ಕೆ ನಾನು ಬೂತ್ ಒಳಗೆ ಇದ್ದೆ ಎಂದು ನುಣುಚಿಕೊಂಡಿದ್ದಾರೆ. ಶೇ.75ಕ್ಕಿಂತ ಹೆಚ್ಚು ಪರ್ಸೆಂಟೇಜ್ ವೋಟು ಆಗಿರುವ ಕಡೆ ಅದನ್ನು ತನಿಖೆ ಮಾಡಿಸಬೇಕು. ಇದಕ್ಕೆ ಕಾನೂನಿನಲ್ಲೆ ಅವಕಾಶವಿದೆ. ಅಕ್ರಮ ಮತದಾನದ ಸಿಗ್ನೇಚರ್ ಚೆಕ್ ಮಾಡಿದ್ದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದಾದ ಮೇಲೆ ಡೀಸಿ ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.

ಕುಕ್ಕೆ ಶ್ರೀಕ್ಷೇತ್ರಕ್ಕೆ 85 ಕೋಟಿ ವೆಚ್ಚದ ಚಿನ್ನದ ರಥ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರದ ದುಡ್ಡಲ್ಲಿ ಮಗ ಗೆಲ್ಲಲಿ ಅಂತಾ ಹಣ ಖರ್ಚು ಮಾಡಲು ಹೊರಟಿದ್ದಾರೆ. ಸರ್ಕಾರದ ಹಣದಲ್ಲಿ ಖರ್ಚು ಮಾಡಿದರೇ ಅವರ ಮಗನಿಗೂ ಒಳ್ಳೆದು ಆಗುತ್ತಾ(?) ದೇವರೆ ನೋಡಿಕೊಳ್ಳಲಿ ಎಂದು ನುಡಿದರು.

ಅಲ್ಲದೇ, ಇವರ ರಕ್ಷಣೆಗೆ ಪೊಲೀಸರ ವಾಹನ ದುರ್ಬಳಕೆ ಮಾಡಿಕೊಂಡಿದ್ದಾರೆ. ವಾಹನದಲ್ಲಿ ಹಣ ಸಿಕ್ಕ ಪ್ರಕರಣವಾಗಿ ಮಾತನಾಡಿದ ಎ. ಮಂಜು, ಒಂದು ದಿನಕ್ಕೆ ಎರಡು ಸಾವಿರ ಕಲೆಕ್ಷನ್ ಆಗುತ್ತಾ(?) ಯಾರದಾರು ನಂಬುವಂತಾ ಮಾತಾ, ರೇವಣ್ಣ ಅವರಿಗೆ ಸುಳ್ಳು ಹೇಳುವುದಕ್ಕೂ ಬರುವುದಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ವೋಟಿಂಗ್ ಆಗುವಾಗ ರೀಗಿಂಗ್ ಆಗಿದೆ ಎಂದು ಬಹುದೊಡ್ಡ ಆರೋಪವಿದೆ. ಇವರ ಮೇಲೆ ಎಫ್​​ಐಆರ್​​ ಹಾಕಬೇಕು. 5 ಗಂಟೆ ಮೇಲೆ ಅತೀ ಹೆಚ್ಚು ಮತದಾನ ಆಗಿರುವ ಬೂತ್​ಗಳಲ್ಲಿ ತನಿಖೆ ಮಾಡಬೇಕು ಎಂದು ಆಗ್ರಹ ಮಾಡುತ್ತೇನೆ.

ಕ್ರಮ ಕೈಗೊಳ್ಳದಿದ್ದರೇ ಕೋರ್ಟ್​​ಗೆ ಹೋಗುತ್ತೇನೆ. ಹಿಂದೆ ಇದ್ದ ರೋಹಿಣಿಯನ್ನು ಹೊಗಳುತ್ತಿದ್ದ ರೇವಣ್ಣ ಈಗ ಯಾಕೇ ಅವರ ಮೇಲೆ ಸಿಟ್ಟು. ಹಳೆ ಡೀಸಿ, ಹೊಸ ಡೀಸಿ ಮನೆಗೆ ಹೋಗಬಾರದು ಅಂತಾ ರೂಲ್ಸ್​​​​​ ಇದಿಯಾ(?) 240 ಬೂತ್​ಗಳಲ್ಲಿ ಏಂಜೆಟ್​​ಗಳನ್ನು ಕೊಂಡುಕೊಂಡಿದ್ದಾರೆ. ಸಚಿವರ ಮೇಲೂ ಎಫ್​​ಐಆರ್​ ಮಾಡಬೇಕು ಎಂದಿದ್ದಾರೆ.

ಸೋಲಿನ ಭೀತಿಯಿಂದ ಡೀಸಿ ವರ್ಗಾವಣೆ ಮಾಡಿ ಅಂತ ಹೇಳುತ್ತಿದ್ದಾರೆ ರೇವಣ್ಣ, ಪಾಪ ಅಧಿಕಾರಿಗಳನ್ನು ಉಪಯೋಗಿಸಿಕೊಂಡಿದ್ದಾರೆ. ಈಗ ಮನೆಗೆ ಬೇರೆ ಹೋಗಿದ್ದಾರೆ. ಕೆಲಸ ಕಳೆದುಕೊಂಡ ಅಧಿಕಾರಿಗಳು ಶಾಪ ಹಾಕುವುದಿಲ್ಲವಾ(?) ಎಂದು ಎ.ಮಂಜು ಪ್ರ್ರಶ್ನೆ ಮಾಡಿದ್ದಾರೆ.

Comments are closed.