ಕರ್ನಾಟಕ

ಎಸ್​​ಎಸ್​​ಎಲ್​ಸಿ: ಟೆಂಪೋ ಚಾಲಕನ ಮಗಳು ರಾಜ್ಯಕ್ಕೆ ಪ್ರಥಮ; ದಿನಕ್ಕೆ 3-5 ತಾಸು ಮಾತ್ರ ಓದು

Pinterest LinkedIn Tumblr


ಬೆಂಗಳೂರು: ಸಾಧಿಸುವ ಚಲವೊಂದಿದ್ದರೆ ಯಾರು ಏನು ಬೇಕಾದ್ರೂ ಮಾಡಬಹುದು ಎನ್ನುವುದಕ್ಕೆ ಈ ವಿದ್ಯಾರ್ಥಿಗೆ ಸಾಕ್ಷಿಯಾಗಿದ್ದಾಳೆ. ಟೆಂಪೋ ಚಾಲಕರೊಬ್ಬರ ಮಗಳು ಎಸ್​​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆಯನ್ನು ಮಾಡಿದ್ದಾಳೆ.

ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ನಾಗಾಂಜಲಿ (625/625) ಅಂಕಗಳನ್ನು ಪಡೆದಿದ್ದಾಳೆ. ವಿದ್ಯಾರ್ಥಿನಿ ಹೆಸರು ನಾಗಾಂಜಲಿ ನಾಯ್ಕ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೊಂಕಣ ಎಜುಕೇಷನ್​ ವಿದ್ಯಾರ್ಥಿನಿಯಾಗಿದ್ದಳು. ಕುಮಟಾದ ಬಾಡಾ ಗ್ರಾಮದ ಹುಬ್ಬುಣಗೆರಿ ನಿವಾಸಿಯಾದ ಪರಮೇಶ್ವರ​​ ನಾಯ್ಕ ಹಾಗೂ ಚೇತನಾ ದಂಪತಿಯ ಪುತ್ರಿ ನಾಗಾಂಜಲಿ. ವಿದ್ಯಾರ್ಥಿಯ ತಂದೆ ಬಿಎಸ್​ಎಫ್​ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಈಗ ಟೆಂಪೋ ಚಾಲಕರಾಗಿದ್ದಾರೆ.

ನಾಗಾಂಜಲಿ ಸಾಧನೆಯ ಹಿಂದೆ….
ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ನಾಗಾಂಜಲಿ, ರಾಜ್ಯಕ್ಕೆ ಪ್ರಥಮ ರ್ಯಾಂಕ್​​​ ಬಂದಿದ್ದು ತುಂಬಾ ಖುಷಿಯಾಗಿದೆ. ಶಿಕ್ಷಕರು ಅಂದಿನ ಪಾಠವನ್ನು ಅಂದೇ ಓದಬೇಕು ಎಂದು ಹೇಳಿದ್ರು. ನಾನು ಅದೇ ರೀತಿ ಮಾಡಿದ್ದೇ. ಪ್ರತಿದಿನ 3 ರಿಂದ 5 ತಾಸು ಓದುತ್ತಿದ್ದೆ. ಇತ್ತೀಚೆಗೆ ನಮ್ಮ ಸಂಸ್ಥೆಯ 25ನೇ ವರ್ಷದ ಸಮಾರಂಭದಲ್ಲಿ 5 ಮಂದಿಯಾದರೂ ರ್ಯಾಂಕ್​​​ ಬರಬೇಕು ಎಂದು ಹೇಳಿದ್ದರು. ಈಗ ನಂಗೆ 625 ಅಂಕಗಳಿಗೆ 625 ಬಂದಿದ್ದು ತುಂಬಾ ಖುಸಿಯಾಗಿದೆ. ನನ್ನ ಸಾಧನೆಗೆ ನನ್ನ ಪಾಲಕರೆ ಕಾರಣ ಜೊತೆಗೆ ಶ್ರದ್ದೆಯಿಂದ ಅಧ್ಯಯನ ಮಾಡಿದ್ದೆ ಕಾರಣ ಎಂದು ತನ್ನ ಖುಷಿಯನ್ನು ಹಂಚಿಕೊಂಡಿದ್ದಾರೆ.

ಪಾಲಕರು ಸಹ ಮಗಳ ಸಾಧನೆ ಕಂಡು ಹರ್ಷ ವ್ಯಕ್ತಪಡಿಸುತ್ತಾರೆ. ಮುಂದೇ ಅವಳು ಏನು ಮಾಡುತ್ತಾಳೆ ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದ್ದೇ ಇರುತ್ತದೆ ಎಂದವರು ಹೇಳುತ್ತಾರೆ. ನಾಗಾಂಜಲಿ ಅವರಿಗೆ ವೈದ್ಯೆಯಾಗುವ ಆಸೆ ಇದೆ. ಡಾಕ್ಟರ್ ಆಗಿ ಹಳ್ಳಿಗಳಲ್ಲಿ ಜನರ ಸೇವೆ ಮಾಡುವುದು ತಮ್ಮ ಜೀವನದ ಗುರಿ ಎಂದು ನಾಗಾಂಜಲಿ ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸಿಎಂ ಕುಮಾರಸ್ವಾಮಿ ಅಭಿನಂಧನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳು ಫೇಲ್​ ಆಯಿತು ಎಂದು ಬೇಸರ ಪಟ್ಟುಕೊಳ್ಳುವ ಬದಲು ಮುಂದಿನ ಬಾರಿ ಹೆಚ್ಚಿನ ಪರಿಶ್ರಮವಹಿಸಿ ಪರೀಕ್ಷೆ ಎದುರಿಸಿದರೆ ಜೀವನದಲ್ಲಿ ಯಶಸ್ವಿಯಾಗುವುದು ಖಂಡಿತ. ಈ ಬಗ್ಗೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಧೃತಿಗೆಡಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆತ್ಮಸ್ಥೈರ್ಯದ ಮಾತುಗಳನ್ನು ನಪಾಸಾದ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ

ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಕಳೆದ ವರ್ಷಕ್ಕಿಂತ ತುಸು ಹೆಚ್ಚಾಗಿರುವುದು ಸಂತೋಷದ ವಿಷಯ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ಶಾಲೆಗಳಿಗೆ ಅಭಿನಂದನೆಗಳು. ಅನುತ್ತೀರ್ಣರಾದ ವಿದ್ಯಾರ್ಥಿಗಳು ನಿರಾಸೆ ಹೊಂದುವ ಅಗತ್ಯವಿಲ್ಲ. ಮುಂದಿನ ಬಾರಿ ಹೆಚ್ಚಿನ ಪರಿಶ್ರಮ ವಹಿಸಿ ಪರೀಕ್ಷೆ ಎದುರಿಸಿ, ಯಶಸ್ವಿಯಾಗಿ.#SSLC

— H D Kumaraswamy (@hd_kumaraswamy) April 30, 2019

ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶೇ. 73.70 ಫಲಿತಾಂಶ ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 1.8 ಹೆಚ್ಚಿನ ಫಲಿತಾಂಶ ಬಂದಿದೆ. ಈ ವರ್ಷವೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ.

ಇದೇ ಮೊದಲ ಬಾರಿಗೆ ಹಾಸನ ಜಿಲ್ಲೆ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದ್ದು, ರಾಮನಗರ ಎರಡನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಕಾಯ್ದುಕೊಂಡಿದೆ. ಒಟ್ಟು 1626 ಶಾಲೆಗಳು 100ಕ್ಕೆ 100 ಫಲಿತಾಂಶ ಪಡೆದಿವೆ. ಉತ್ತರ ಕನ್ನಡ 4ನೇ ಸ್ಥಾನವನ್ನು ಪಡೆದುಕೊಂಡಿದೆ ಕಳೆಸ ಬಾರಿ ಏಳನೇ ಸ್ಥಾನದಲ್ಲಿತ್ತು.

ಕುಮಟಾದ ಕೊಂಕಣ ಎಜುಕೇಷನ್​​​ ನಾಗಾಂಜಲಿ ಜೊತೆಗೆ ಸೃಜನಾ ಡಿ.625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. 11 ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆದಿದ್ದಾರೆ

Comments are closed.