ಕರ್ನಾಟಕ

ಮಂಡ್ಯ ಜನರಲ್ಲಿ ದೇವರ ಕಂಡೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಥ್ಯಾಂಕ್ಸ್​ ಹೇಳಿದ ಸುಮಲತಾ

Pinterest LinkedIn Tumblr


ಮಂಡ್ಯ: ಇಲ್ಲಿಗೆ ನಾನು ಬಂದಿದ್ದು, ನನ್ನ ನೋವು ತೋರಿಸಲು ಅಲ್ಲ, ಜನರ ಕಣ್ಣೀರು ಒರೆಸಲು. ನಾಲ್ಕುವಾರಗಳ ಕಾಲ ಮಂಡ್ಯದಲ್ಲಿ ಜನರನ್ನು ಕಂಡೆ ಎಂದು ಸುಮಲತಾ ತಮ್ಮ ಕೊನೆಯ ಪ್ರಚಾರದ ವೇಳೆ ಭಾವುಕರಾದರು.

ಅಂತಿಮ ಪ್ರಚಾರ ಅಂಗವಾಗಿ ಏರ್ಪಡಿಸಲಾಗಿದ್ದ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದ ಅವರು ಇದೇ ವೇಳೆ ಕಾಂಗ್ರೆಸ್​ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು. ಪಕ್ಷ ಉಚ್ಛಾಟನೆ ಮಾಡಿತ್ತೀನಿ ಎಂದು ಬೆದರಿಸಿದರೂ ಸ್ವಾಭಿಮಾನದಿಂದ ನನಗೆ ಬೆಂಬಲ ನೀಡಿದರು. ಅವರು ಒಂದು ವೇಳೆ ನಿಮ್ಮ ಉಚ್ಛಾಟನೆ ಮಾಡಿದ್ರೂ ನಾನವರನ್ನು ಕೈಬಿಡಲ್ಲ ಎಂಬ ಭರವಸೆ ನೀಡಿದರು.

ಸಿಎಂ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್​ ನಾಯಕರು ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಮತ ನೀಡಿದಲ್ಲಿ ಊರಿನಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜನರ ವಿರುದ್ಧ ಅವರು ಸೇಡಿನ ರಾಜಕಾರಣ ನಡೆದಿದೆ. ಕ್ಷೇತ್ರ ಪ್ರವಾಸ ನಡೆಸುವ ಮೂಲಕ ಜಿಲ್ಲೆಯಿಡೀ ಸೇಡಿನ ರಾಜಕಾರಣವನ್ನು ಕಂಡಿದ್ದೇನೆ ಎಂದರು.

ಮಹಿಳೆಯರ ಮೇಲೆ ಸಿಎಂಗೆ ಗೌರವವಿಲ್ಲ

ಸಿಎಂ ಎಚ್​ಡಿಕೆಗೆ ಯಾರ ಮೇಲೂ ಕಾಳಜಿಯಿಲ್ಲ ರೈತರು, ಮಹಿಳೆಯರು, ಸೇನೆ ಬಗ್ಗೆ ಗೌರವವಿಲ್ಲ. ಅವರ ಕುಟುಂಬದ ವಿರುದ್ಧ ನಿಂತವರ ತೇಜೋವಧೆ ಮಾಡುತ್ತಾರೆ. ಅವರಿಗೆ ಸ್ನೇಹಕ್ಕೂ ಗೌರವ ಕೊಡಲ್ಲ. ನಾನು ಅವರ ಸ್ನೇಹಿತನ ಹೆಂಡತಿ ಎಂಬುದನ್ನು ನೋಡಲಿಲ್ಲ. ಬೆಂಬಲ ಬಿಡಿ, ಗೌರವ ಕೊಟ್ಟು ಮಾತನಾಡಬಹುದಲ್ಲ?ಇಂಥ ಸಂದರ್ಭದಲ್ಲಿ ನನ್ನ ತೇಜೋವಧೆ ಸರಿಯೇ ಎಂದು ಪ್ರಶ್ನಿಸಿದರು

ಕ್ಷೇತ್ರದಲ್ಲಿ ಸಿಎಂ ಮಾತ್ರವಲ್ಲದೇ, ಸಚಿವರು, ಶಾಸಕರು, ಮಾಜಿ ಪ್ರಧಾನಿ ಎಲ್ಲರೂ ನೀವೆಲ್ಲ ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿದ್ದರು. ಒಬ್ಬ ಕ್ರಿಮಿನಲ್​ನಂತೆ ನನ್ನನ್ನು ನೋಡಿದರು. ನಾನು ಹುಚ್ಚೇಗೌಡರ ಸೊಸೆ. ನಿಮ್ಮಿಂದ ಸರ್ಟಿಫಿಕೇಟ್​ ತೆಗೆದುಕೊಳ್ಳಬೇಕಿಲ್ಲ ಎಂದು ತಿರುಗೇಟು ನೀಡಿದರು

ಹೆಣ್ಮಗಳನ್ನು ಎದುರಿಸಲು ಸಾಧ್ಯವಿಲ್ವಾ

ಯಶ್, ದರ್ಶನ್​ ನನ್ನ ಮಕ್ಕಳಂತೆ ನನ್ನ ಬೆಂಬಲಕ್ಕೆ ಬಂದರು. ಯಾಕೆ ನಿಮ್ಮ ಪರ ಅಪ್ಪ, ಅಜ್ಜಿ, ಆಂಟಿ ಎಲ್ಲ ಬಂದಿಲ್ವಾ? ಒಬ್ಬ ಹೆಣ್ಮಗಳ ಮೇಲೆ ಇಷ್ಟು ಭಯನಾ? ಆಂಧ್ರದಿಂದ ಸಿಎಂ, ರಾಹುಲ್​ ಕೂಡಾ ಬಂದರು. ಡಿಕೆಶಿಯಂಥ ಒಳ್ಳೆಯ ಫ್ರೆಂಡ್ಸ್​ ಕೂಡ ಬರ್ತಾರೆ. ಒಬ್ಬ ಹೆಣ್ಮಗಳನ್ನು ಎದುರಿಸಲು ಇಷ್ಟು ಜನ ಎಂದರು ಕುಟುಕಿದರು

ಅಂಬಿ ಸ್ಪರ್ಧಿಸಿದಾಗ ಅವರ ವಿರುದ್ಧ ಕೆಲಸ ಮಾಡಿದ್ದರು. ಕಾಂಗ್ರೆಸ್​ನವರೇ ಅಂಬಿ ವಿರುದ್ಧ ಕೆಲಸ ಮಾಡಿದ್ದರು. ಆ ವ್ಯಕ್ತಿ ಯಾರೆಂದು ನಿಮಗೆ ಗೊತ್ತಿದೆ. ಅವರ ಮೇಲೆ ವೈಯಕ್ತಿಕ ಟೀಕೆಗೆ ಸಾವಿರ ವಿಷಯಗಳಿವೆ. ಆದರೆ ಅಂಥ ಕೆಲಸಕ್ಕೆ ನಾವು ಕೈಹಾಕಲ್ಲ ಎಂದರು

ಸಮಾಧಿ ಮೇಲೆ ನಿಮ್ಮ ಮಗನ ಗೆಲುವಿನ ರಾಜಕಾರಣ?
ಬಸ್​ ದುರಂತ ಸುದ್ದಿ ಟಿವೀಲಿ ಅಂಬಿ ನೋಡ್ತಿದ್ದವರು. ನೋಡುತ್ತ ನೋಡುತ್ತಲೇ ಎದೆಬಡಿತ ನಿಂತಿತ್ತು. ಪತಿ ಕಳೆದುಕೊಂಡ ಪತ್ನಿ ಕಣ್ಣೀರು ಹಾಕಿದ್ರೆ ಡ್ರಾಮಾ ಎನ್ನುತ್ತಾರೆ. ಮಗನ ಗೆಲುವಿಗಾಗಿ ಕಣ್ಣೀರು ಹಾಕೋದು ಏನು ಎಂದು ಪ್ರಶ್ನಿಸಿದರು.

ಅಂಬರೀಷ್​ ಅಂತ್ಯಕ್ರಿಯೆಯ ರಾಜಕಾರಣವನ್ನೂ ಮಾಡಿದರು. ಮಂಡ್ಯಕ್ಕೆ ಅಂಬಿ ಪಾರ್ಥಿವಶರೀರ ತರುವ ವಿಚಾರವನ್ನು ಲಾಭಾಕ್ಕೆ ಬಳಸಿಕೊಂಡರು. ಎಷ್ಟು ಸಲ ಸಿಎಂ ಈ ವಿಚಾರ ಹೇಳಿದ್ರು? ಇವೆಲ್ಲಾ ಬಹಿರಂಗ ಮಾತಾಡೋ ವಿಚಾರ ಅಲ್ಲ. ಆದರೆ ಸಿಎಂ ಈ ರೀತಿ ಮಾತಾಡಲು ಒತ್ತಡ ಹಾಕಿದರು ಎಂದು ಕಣ್ಣೀರು ಹಾಕಿದರು.

ಇಂದಿನ ಈ ಕಣ್ಣೀರಲ್ಲಿ ನೋವಿಲ್ಲ, ಧೈರ್ಯವಿದೆ. ಮಂಡ್ಯಕ್ಕೆ ಕರೆದೊಯ್ಯದಿದ್ರೆ ತಪ್ಪಾಗುತ್ತೆ ಎಂದು ಅಭಿ ಹೇಳಿದ. ಆದರೆ ಮಂಡ್ಯಕ್ಕೆ ಕರೆದೊಯ್ಯುವುದು ಬೇಡ ಎಂದಿದ್ರು ಸಿಎಂ. ಮಂಡ್ಯದಿಂದ 500 ಬಸ್​ ವ್ಯವಸ್ಥೆ ಮಾಡೋಣ ಎಂದಿದ್ದರು. ಆಗ ನೀವ್ಯಾರು ಬಸ್​ ಕೊಡೋಕೆ ಅಂತ ನಮಗೆ ಪ್ರಶ್ನಿಸಿದರು. ಸಿಎಂ ಪಕ್ಕ ಇದ್ದವರೊಬ್ಬರು ಈ ಮಾತು ನಮಗೆ ತಿಳಿಸಿದರು. ಮಂಡ್ಯದ ಮಣ್ಣು ಹಚ್ಚಿ ಅಂಬಿಯನ್ನು ಕಳಿಸಿದ್ದೇವೆ. ಶ್ರದ್ಧಾಂಜಲಿ ಸಭೆಯಲ್ಲಿ ಸೋದರನಂತಿರುತ್ತೇನೆ ಎಂದಿದ್ದರು. ಸೋದರನಂತೆ ನಡೆದುಕೊಳ್ಳೋದು ಇದೇನಾ? ಸಮಾಧಿ ಮೇಲೆ ನಿಮ್ಮ ಮಗನ ಗೆಲುವಿನ ರಾಜಕಾರಣ ಮಾಡುತ್ತಿದ್ದೀರಾ ಎಂದು ಗುಡುಗಿದರು.

Comments are closed.