ಕರ್ನಾಟಕ

ದೇವೇಗೌಡರ ಕುಟುಂಬದ ವಿರುದ್ದ ನನ್ನ ಹೋರಾಟ; ಎಚ್​.ಎಂ. ವಿಶ್ವನಾಥ್

Pinterest LinkedIn Tumblr


ಹಾಸನ: ದೇವೇಗೌಡರ ಕುಟುಂಬದ ವಿರುದ್ದ ನನ್ನ ಹೋರಾಟ. ಗುಲಾಮಗಿರಿ ವಿರುದ್ದ ನನ್ನ ಹೋರಾಟ. ಕುಟುಂಬ ರಾಜಕಾರಣಕ್ಕೆ ನೀವು ಮತ ಹಾಕಬೇಡಿ. ನಮ್ಮ ಕಾಂಗ್ರೆಸ್ ಪಕ್ಷದಲ್ಲೂ ಕುಟುಂಬ ಆಡಳಿತವಿದೆ . ಆದರೆ ನಮ್ಮ ಕಾಂಗ್ರೆಸ್​ನಲ್ಲಿ ಜಾತ್ಯತೀತ ತತ್ವವಿದೆ. ನೀವು ಯಾರೂ ವಂಶಾಡಳಿತಕ್ಕೆ ಮತ ಹಾಕಬೇಡಿ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಚ್​.ಎಂ. ವಿಶ್ವನಾಥ್​​​ ಹೇಳಿದ್ದಾರೆ.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ದೇವೇಗೌಡರ ಬಗ್ಗೆ ನನಗೆ ಗೌರವವಿದೆ. ಆದರೆ ಮೊಮ್ಮಕ್ಕಳ ಸ್ಪರ್ಧೆಗೆ ನನ್ನ ವಿರೋಧವಿದೆ. ದೇಶದಲ್ಲಿ ಎಲ್ಲೂ ಈ ರೀತಿಯ ವಂಶಾಡಳಿತವನ್ನು ನಾನು ನೋಡಿಲ್ಲಾ. ಜೆಡಿಎಸ್ ಗೆ ಮತ ಹಾಕಬೇಡಿ ನೀವು ಬಿಜೆಪಿ, ಬಿಸ್​ಪಿ, ಅಥವಾ ಪಕ್ಷೇತರ ಅಭ್ಯರ್ಥಿಗಾದ್ರೂ ಮತ ಹಾಕಿ. ಆದರೆ ವಂಶಾಡಳಿತಕ್ಕೆ ಮತ ಹಾಕಬೇಡಿ. ವಂಶಪಾರಂಪರ್ಯ ಆಡಳಿತ ಕೊನೆಗೊಳಿಸಿ ಪ್ರಜಾಪ್ರಭುತ್ವ ಸ್ಥಾಪಿಸಿ, ಪಕ್ಷದಲ್ಲಿ ನಾವು ಕೂಲಿ ಕಾರ್ಮಿಕರಿದ್ದಂತೆ, ನಮ್ಮನ್ನ ಪಕ್ಷದಿಂದ ಉಚ್ಛಾಟನೆ ಮಾಡಿದ್ರೂ ನಾವು ಸಿದ್ದರಿದ್ದೇವೆ ಎಂದರು.

ಕಳೆದ ಬಾರಿ 4ಲಕ್ಷದ 20 ಸಾವಿರ ಮತಗಳು ಕಾಂಗ್ರೆಸ್ ಗೆ ಬಿದ್ದಿವೆ ಎಲ್ಲರನ್ನೂ ಉಚ್ಛಾಟನೆ ಮಾಡಿ. ನೀವು ಉಚ್ಛಾಟನೆ ಮಾಡಿದ್ರೆ ಮತ್ತೆ ಉಳಿಯೋದು ಬರೀ ಖಾಲಿ ಡಬ್ಬಾ ಎಂದು ಸ್ವಪಕ್ಷ ಕಾಂಗ್ರೆಸ್ ಗೆ ವಿಶ್ವನಾಥ್ ಟಾಂಗ್ ಕೊಟ್ಟರು.

ಹಾಸನ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಮಾಜಿ ಸಚಿವ ಎ,ಮಂಜು ಪುತ್ರ ಮಂಥರ್ ಗೌಡ ಅವರನ್ನು ಉಚ್ಚಾಟನೆ ಮಾಡಲಾಗಿದೆ. ನೂತವಾಗಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಸುಜನ್ ಗೌಡ ಅವರನ್ನು ನೇಮಕ ಮಾಡಲಾಗಿದೆ. ಸುಜನ್ ಗೌಡ ಕೆಪಿಸಿಸಿ ಉಪಾಧ್ಯಕ್ಷ ಗಂಡಸಿ ಶಿವರಾಮ್ ಪುತ್ರ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎ.ಮಂಜು.ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಶ್ರಮವಹಿಸದೆ ಇರುವ ಕಾರಣ ನೀಡಿ ಮಂಥರ್ ಗೌಡ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎನ್ನಲಾಗಿದೆ.

Comments are closed.