ಕರ್ನಾಟಕ

ಜೆಡಿಎಸ್​ ಸಭೆಯಲ್ಲಿ ಮೋದಿಗೆ ಜೈಕಾರ ಕೂಗಿದ ದಳ ಕಾರ್ಯಕರ್ತರು

Pinterest LinkedIn Tumblr

ಮೈಸೂರು: ಮೈಸೂರಿನಲ್ಲಿ ಇಂದು ಸಚಿವ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್​ ಸಭೆಯಲ್ಲಿ ಗದ್ದಲ ಏರ್ಪಟ್ಟು, ಕಾರ್ಯಕರ್ತರು ಮೋದಿಗೆ ಜೈಕಾರ ಕೂಗಿದ ಘಟನೆ ನಡೆದಿದೆ. ಪರಿಷತ್ ಸದಸ್ಯ ಮರಿತಿಬ್ಬೆಗೌಡ ವೇದಿಕೆಯ ಮೇಲೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆದರೆ, ಸಭೆ ನಡೆಯುತ್ತಿದ್ದ ವೇಳೆ ಅಚ್ಚರಿ ಎಂಬಂತೆ ಕಾರ್ಯಕರ್ತರು ಏಕಾಏಕಿ ಗಲಾಟೆಗೆ ಮುಂದಾಗಿದ್ದಾರೆ. ನಂತರ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದ್ದಾರೆ.

ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್​ನ ಸಿ.ಎಚ್. ವಿಜಯ್​ ಶಂಕರ್​ ಕಣಕ್ಕೆ ಇಳಿದಿದ್ದಾರೆ. ಮೈತ್ರಿ ಒಪ್ಪಂದದಂತೆ ವಿಜಯ್​ ಶಂಕರ್​ ಪರವಾಗಿ ಜೆಡಿಎಸ್​ ಕೂಡ ​ ಪರವಾಗಿ ಪ್ರಚಾರ ನಡೆಸುತ್ತಿದೆ. ಇದು ಕೆಲ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಇಂದು ಜೆಡಿಎಸ್​ ಕಾರ್ಯಕರ್ತರು ಹಿರಿಯ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ.

“ನೀವು ಈಗ ಮೈತ್ರಿಯ ಜಪ ಮಾಡುತ್ತಿದ್ದೀರಿ. ಆದರೆ, ಕಳೆದ ಚುನಾವಣೆಲ್ಲಿ ಪ್ರಕರಣಗಳಾಗಿದ್ದು ನಮ್ಮ ಮೇಲೆ. ಸಿದ್ದರಾಮಯ್ಯ ಬಂದು ಮತ ಕೇಳಲಿ ಆಮೇಲೆ ನೋಡಿಕೊಳ್ಳುತ್ತೇವೆ,” ಎಂದು ಕಾರ್ಯಕರ್ತರು ಕಿಡಿಕಾರಿದರು. ಈ ವೇಳೆ ಕೆಲವರು ಬಿಜೆಪಿಗೆ, ಇನ್ನೂ ಕೆಲವರು ನರೇಂದ್ರ ಮೋದಿಗೆ ಜೈಕಾರ ಕೂಗಿ ಪಕ್ಷದ ವಿರುದ್ಧ ಘೋಷಣೆ ಕೂಗಿದರು.

ಗಲಾಟೆ ಹೆಚ್ಚಾಗುತ್ತಿದ್ದಂತೆ ವೇದಿಕೆಯ ಮೇಲಿದ್ದ ಸಚಿವ ಜಿಟಿ ದೇವೇಗೌಡ ಕಾರ್ಯಕರ್ತರ Loಬಳಿ ಬಂದರು. ಅವರನ್ನು ಸಮಧಾನ ಮಾಡುವ ಪ್ರಯತ್ನ ನಡೆಯಿತು. ಆದರೆ, ಜಿಟಿಡಿ ‌ಮಾತನ್ನು ಲೆಕ್ಕಿಸದ ಕಾರ್ಯಕರ್ತರು ಘೋಷಣೆ ಮುಂದುವರಿಸಿದರು.

Comments are closed.