ಕರ್ನಾಟಕ

ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಆಯೋಗಕ್ಕೆ ದೂರು!

Pinterest LinkedIn Tumblr


ಬೆಂಗಳೂರು: ಮಹಿಳಾ ಕಾಂಗ್ರೆಸ್ ಪರವಾಗಿ ಆಯೋಗಕ್ಕೆ ದೂರು ನೀಡಲಾಗಿದೆ‌. ಹೆಣ್ಮಕ್ಕಳ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡುವವರು ಒಂದು ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಒಬ್ಬ ಹೆಣ್ಮಗಳು ಟ್ವಿಟರ್ ನಲ್ಲಿ ಆತಂಕ ಹೊರಹಾಕಿದ್ದು ನಮಗೆಲ್ಲ ಗೊತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಮಹಿಳಾ ಆಯೋಗಕ್ಕೆ ಕಾಂಗ್ರೆಸ್ ಮಹಿಳಾ ಘಟಕ ಶುಕ್ರವಾರ ದೂರು ಸಲ್ಲಿಸಿತು. ಹೆಣ್ಮಕ್ಕಳು ಸ್ವತಂತ್ರವಾಗಿ ಬದುಕಬಾರದು ಎನ್ನುವವರಿಗೆ ಟಿಕೆಟ್ ನೀಡಲಾಗಿದೆ‌ ಎಂದು ಮಂಜುಳಾ ನಾಯ್ಡು ಆರೋಪಿಸಿದರು.

ತೇಜಸ್ವಿ ಸೂರ್ಯರಿಂದ ಆದ ಅನ್ಯಾಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬಳು ಅಳಲು ಹೊರಹಾಕಿದ್ದರು . ಈಗ ಅವರು ಟ್ವೀಟ್ ಡಿಲೀಟ್ ಮಾಡಿದ್ದು ಬೆದರಿಕೆ ಇರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ದೂರು ಬಂದಿದೆ. ಮಹಿಳೆ ಒಬ್ಬರಿಗೆ ಲೈಂಗಿಕ ಕಿರುಕುಳ ನೀಡಿರೋ ಆರೋಪ ಇದೆ. ಕೆಪಿಸಿಸಿ ಮಹಿಳಾ ಘಟಕ ದೂರು ಸ್ವೀಕರಿಸಿದ್ದೇನೆ. ನೊಂದ ಮಹಿಳೆಯನ್ನು ಕರೆದು ಮಾತಾಡಿಸುತ್ತೇನೆ. ಬಳಿಕ ತೇಜಸ್ವಿ ಸೂರ್ಯ ಅವರಿಗೆ ವಿಚಾರಣೆಗೆ ಕರೆಯಲಾಗುವುದು ಎಂದು ಸುವರ್ಣ ನ್ಯೂಸ್ ಗೆ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ತಿಳಿಸಿದ್ದಾರೆ.

Comments are closed.