
ಬೆಂಗಳೂರು: ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ನಿಂತಿರುವ ಯಶ್ ಹಾಗೂ ದರ್ಶನ್ ವಿರುದ್ಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅವರಿಬ್ಬರೂ ಜೋಡೆತ್ತುಗಳಲ್ಲ ಕಳ್ಳೆತ್ತುಗಳು ಎಂದು ವ್ಯಂಗ್ಯವಾಡಿದ್ದಾರೆ. ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗೆ ದರ್ಶನ್ ಮನೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದ ಮರುಕ್ಷಣವೇ ಪೊಲೀಸರಿಗೆ ಮನೆ ಸಮೀಪ ಇದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡು ಬರುವಂತೆ ಹೇಳಿದ್ದೆ. ಆದರೆ, ಸಿಸಿಟಿವಿ ಆಫ್ ಆಗಿತ್ತು ಎಂದು ದರ್ಶನ್ ಹೇಳಿದ್ದಾರೆ. ಹಾಗಾದರೆ, ಅದನ್ನು ಆಫ್ ಮಾಡಿದವರು ಯಾರು? ಮುಂಜಾನೆ ಮೂರು ಗಂಟೆಗೆ ಯಾರಾದರೂ ಕಲ್ಲು ತೂರುತ್ತಾರಾ,” ಎಂದು ಪ್ರಶ್ನಿಸಿದರು.
Comments are closed.