ಕರ್ನಾಟಕ

ನಿನ್ನ ಪಲ್ಲಕ್ಕಿ ಹೊರೋನೂ ನಾನೇ, ನಿನ್ನ ಹೆಣ ಹೊರೋನೂ ನಾನೇ ಎಂದು ಶಾಸಕ ನಾಗೇಂದ್ರಗೆ ಎಚ್ಚರಿಕೆ ನೀಡಿದ ಡಿಕೆಶಿ

Pinterest LinkedIn Tumblr


ಬಳ್ಳಾರಿ: ಅತೃಪ್ತರ ಜೊತೆ ಗುರುತಿಸಿಕೊಂಡಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಸಚಿವ ಡಿಕೆ ಶಿವಕುಮಾರ್ ಕೊಟ್ಟ ಎಚ್ಚರಿಕೆಗೆ ತಬ್ಬಿಬ್ಬಾಗಿದ್ದಾರೆ. ನಾಗೇಂದ್ರ ಅವರಿಗೆ ತಮ್ಮದೇ ಧಾಟಿಯಲ್ಲಿ ವಾರ್ನಿಂಗ್ ನೀಡಿರುವ ಡಿಕೆಶಿ, ತಪ್ಪು ಮಾಡದಂತೆ ಸ್ವೀಟ್ ವಾರ್ನಿಂಗ್ ಕೊಟ್ಟಿದ್ದಾರೆ.

ಸಂಡೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ, ನಾಗೇಂದ್ರ ನಮ್ಮ ಹುಡುಗ ತಪ್ಪು ಮಾಡಿದ್ದಾನೆ ಆದರೆ ತಪ್ಪು ತಿದ್ದಿಕೊಂಡು ಮರಳಿದ್ದಾನೆ ಎಂದು ಹೇಳಿದರು. ಈ ವೇಳೆ ನಾಗೇಂದ್ರ ಅವರಿಗೆ ಸ್ವೀಟ್ ವಾರ್ನಿಂಗ್ ಕೊಟ್ಟ ಡಿಕೆಶಿ, ‘ನಿನ್ನ ಪಲ್ಲಕ್ಕಿ ಹೊರೋನೂ ನಾನೇ, ನಿನ್ನ ಹೆಣ ಹೊರೋನೂ ನಾನೇ..’ ಎಂದು ಖಡಕ್ ವಾರ್ನಿಂಗ್ ನೀಡಿದರು.

ಡಿಕೆಶಿ ಈ ಮಾತನಾಡಿದಾಗ ನಾಗೇಂದ್ರ ವೇದಿಕೆ ಮೇಲೆ ಇರಲಿಲ್ಲ. ಆದರೂ ಡಿಕೆಶಿ ಅವರ ಈ ಹೇಳಿಕೆ ಬಳ್ಳಾರಿ ಜಿಲ್ಲೆಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

Comments are closed.