ಕರ್ನಾಟಕ

ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಿದ್ದಾಗ ಹನುಮಂತನ ಮೊಬೈಲ್ ಕಳ್ಳತನ!

Pinterest LinkedIn Tumblr


ಹಾವೇರಿ: ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಹನುಮಂತರ ಮೊಬೈಲ್ ಕಳ್ಳತನವಾಗಿದೆ. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಮೊಬೈಲ್ ಕಳ್ಳತನವಾಗಿದೆ.

ರಿಯಾಲಿಟಿ ಶೋನಲ್ಲಿ ಎರಡನೇ ಸ್ಥಾನ ಪಡೆದ ಬಳಿಕ ಹನುಮಂತರ ಜೀವನವೇ ಬದಲಾಗಿದೆ. ಹನುಮಂತ ರಾಜ್ಯಾದ್ಯಂತ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರನ್ನು ರಂಜಿಸುತ್ತಾ ಬರುತ್ತಿದ್ದಾರೆ. ಕೇವಲ ಮೊಬೈಲ್ ನಲ್ಲಿ ಹಾಡುಗಳನ್ನು ಕೇಳಿಕೊಂಡು, ಸಂತ ಶಿಶುನಾಳ ಶರೀಫ್ ಅಜ್ಜರನ್ನು ಗುರುವಾಗಿಸಿಕೊಂಡ ಹನುಮಂತ ಸಂಗೀತ ಕಲಿತಿದ್ದರು. ಇದೀಗ ಅದೇ ಶಿಶುನಾಳ ಗ್ರಾಮದಲ್ಲಿ ಹಾಡು ಹೇಳುತ್ತಿದ್ದ ಸಂದರ್ಭದಲ್ಲಿ ಕಳ್ಳರು ಹನುಮಂತ ಅವರ ಮೊಬೈಲ್ ಕದ್ದಿದ್ದಾರೆ.

ಉಡುಗೊರೆಯ ಮೊಬೈಲ್:
ರಿಯಾಲಿಟಿ ಶೋದಲ್ಲಿ ಭಾಗಿಯಾಗುವ ಮುನ್ನ ಸಾಧಾರಣ ಮೂಬೈಲ್ ಇಟ್ಟುಕೊಂಡಿದ್ದ ಹನುಮಂತರಿಗೆ ಸಹ ಸ್ಪರ್ಧಿಯಾಗಿದ್ದ ಡಾ.ಅಭಿಷೇಕ್ ಸ್ಮಾರ್ಟ್ ಫೋನ್ ಉಡುಗೊರೆಯಾಗಿ ನೀಡಿದ್ದರು. ಮೊಬೈಲ್ ಕಳ್ಳತನವಾಗಿದ್ದನ್ನ ಅರಿತ ಹನುಮಂತ ವೇದಿಕೆಯಲ್ಲಿ ನನ್ನ ಮೊಬೈಲ್ ನೀಡಿ ಎಂದು ನೆರೆದಿದ್ದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಡಾ.ಅಭಿಷೇಕ್ ನೀಡಿದ್ದ ಮೊಬೈಲ್ ಕಳೆದುಕೊಂಡ ಹನುಮಂತ ದುಃಖದಲ್ಲಿದ್ದರೂ, ಹಾಡು ಹೇಳಿ ಜನರನ್ನು ರಂಜಿಸಿದರು. ಮೊಬೈಲ್ ಬೇಕಾದ್ರೆ ಇಟ್ಟುಕೊಳ್ಳಿ, ಸಿಮ್ ಆದ್ರೂ ಕೊಡಿ ಎಂದು ಹನುಮಂತ ಸಾರ್ವಜನಿರಕಲ್ಲಿ ಮನವಿ ಮಾಡಿಕೊಂಡರು.

Comments are closed.