ಕರ್ನಾಟಕ

ಶಾಸಕರ ಮಧ್ಯೆ ಹೆಣ್ಣಿಗೋಸ್ಕರ ನಡೀತಾ ಫೈಟ್?

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್ ಶಾಸಕರಾದ ಕಂಪ್ಲಿ ಗಣೇಶ್ ಹಾಗೂ ಆನಂದ್ ಸಿಂಗ್ ಹೊಡೆದಾಡಿಕೊಂಡಿದ್ದ ವಿಡಿಯೋ ಇದೀಗ ಬಹಿರಂಗವಾಗಿದೆ.
ಆಪರೇಷನ್ ಕಮಲದಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಇರಿಸಿತ್ತು. ಈ ವೇಳೆ ಗಣೇಶ್ ಮತ್ತು ಆನಂದ್ ಸಿಂಗ್ ಆವಾಚ್ಯ ಶಬ್ದಗಳಿಂದ ಹೊಡೆದಾಡಿಕೊಂಡಿದ್ದು ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ವಿಡಿಯೋದಲ್ಲಿ ಆ ಮಹಿಳೆ ಎಂಬ ಮಾತುಗಳು ಕೇಳಿಬಂದಿದೆ. ಇಬ್ಬರ ಜಗಳಕ್ಕೆ ಕಾರಣವಾದ ಈ ಮಹಿಳೆ ಯಾರೆಂಬುದರ ಬಗ್ಗೆ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಆರಂಭಗೊಂಡಿದೆ. ಮೇಲ್ನೋಟಕ್ಕೆ ಮಹಿಳೆಗಾಗಿಯೇ ಈ ಜಗಳ ನಡೆದಿದೆ ಎಂದು ದೃಶ್ಯಗಳು ಹೇಳುತ್ತಿವೆ.
ರೆಸಾರ್ಟ್ ಸೇರಿದ ಶಾಸಕರು ಅಂದು ರಾತ್ರಿ ಪಾರ್ಟಿ ಮಾಡಿದ್ದರು. ಈ ವೇಳೆ ಮದ್ಯ ಸೇವನೆ ಮಾಡಿದ್ದ ಆನಂದ್ ಸಿಂಗ್ ನೇರವಾಗಿ ಗಣೇಶ್ ಕೋಣೆಗೆ ಎಂಟ್ರಿ ನೀಡಿದ್ರು, ಈ ವೇಳೆ ಕೋಣೆಯಲ್ಲಿ ಗಣೇಶ್ ಕೊರಳಪಟ್ಟಿ ಹಿಡಿದ ಆನಂದ್ ಸಿಂಗ್ ಜಗಳಕ್ಕೆ ನಿಂತಿದ್ದರು. ಆನಂದ್ ಸಿಂಗ್ ಹಲ್ಲೆಗೆ ಮುಂದಾಗುತ್ತಿದ್ದಂತೆ ಗಣೇಶ್ ಅಣ್ಣ ನೀವು ಮಾಡುತ್ತಿರುವುದು ತಪ್ಪು ಎಂದು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು.

Comments are closed.