ಕರ್ನಾಟಕ

ಪ್ರತಾಪ್ ಸಿಂಹ VS ಪ್ರಕಾಶ್ ರೈ, ಒಂದು ರೂಪಾಯಿ ಕೇಸ್ ಹಾಕಿದ ಅಸಲಿ ಕಾರಣ

Pinterest LinkedIn Tumblr


ಮೈಸೂರು: ಸಂಸದ ಪ್ರತಾಪ್ ಸಿಂಹ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ವಾರೆಂಟ್ ನೀಡಿತ್ತು. ಈ ಬಗ್ಗೆ ಪ್ರತಾಪ್ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.

ನಟ ಪ್ರಕಾಶ್ ರೈ ಹಾಕಿರೋ ಕೇಸ್ ಟೊಳ್ಳು ಕೇಸ್. ನಮ್ಮ ಕಚೇರಿಗೆ ಸಮನ್ಸ್ ಬಂದಿದೆ , ಅದನ್ನು ಕಚೇರಿ ಸಿಬ್ಬಂದಿ ರಿಸೀವ್ ಮಾಡಿದ್ದಾರೆ. ಆದ್ರೆ ನನ್ನ ಗಮನಕ್ಕೆ ಬಂದಿರಲಿಲ್ಲ, ಹೀಗಾಗಿ ನಾನು ಕೂಡ ಹಾಜರಾಗಿಲ್ಲ. ಆ ಕೇಸ್ ನಿಲ್ಲೊದಿಲ್ಲ, ಅದ್ರಲ್ಲಿ ಯಾವುದೇ ಹುರುಳಿಲ್ಲ. ನಾನು ಮತ್ತೆ ಆ ಕೇಸ್ ರೀ ಕಾಲ್ ಮಾಡಿಸುತ್ತೇನೆ ಎಂದಿದ್ದಾರೆ.

ಕೇವಲ ಪ್ರಚಾರಕ್ಕೆ ಪ್ರಕಾಶ್ ರೈ ಕೇಸ್ ಹಾಕಿದ್ದಾರೆ ಅಷ್ಟೇ. ಮಾರ್ಚ್ 19 ಕ್ಕೆ ನಾನು ಜನಪ್ರತಿನಿಗಳ ನ್ಯಾಯಾಲಕ್ಕೆ ಕೇಸ್ ಸಂಬಂಧ ಹಾಜರಾಗ್ತೀನಿ. ನಾನು ಸಾಮಾಜಿಕ ಜಾಲತಾಣದಲ್ಲಿ ಆ ಪೋಸ್ಟ್ ಶೇರ್ ಮಾಡಿದ್ದೆ ಅಷ್ಟೇ. ಹೀಗೆ ನೋಡಿದ್ರೆ ಆ ಬರವಣಿಗೆ ಬರದವರ ಮೇಲೆ ಕೇಸ್ ಹಾಕಬಹುದಿತ್ತು ಎಂದರು.

ಜನಸಾಮಾನ್ಯ ಮಾಡೋ ತರ ನಾನ್ ಶೇರ್ ಮಾಡಿದ್ದಕ್ಕೆ ನನ್ನ ಮೇಲೆ 1 ರೂಪಾಯಿಗೆ ರೈ ಕೇಸ್ ಹಾಕಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

Comments are closed.