ಕರ್ನಾಟಕ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮ್ಯೂಸಿಯಂ ಶಂಕುಸ್ಥಾಪನೆ: ಸಮಾಧಿ ಸ್ಥಳದ ಅಭಿವೃದ್ಧಿಗೆ 267 ಕೋಟಿ ಬಿಡುಗಡೆ

Pinterest LinkedIn Tumblr


ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತನ್ನ ಸಾಮ್ರಾಜ್ಯದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ವೀರ ಸೇನಾನಿ. ಸಂಗೊಳ್ಳಿ ರಾಯಣ್ಣನ ಶೌರ್ಯ, ಪರಾಕ್ರಮ ಎಲ್ಲರಿಗೂ ಮಾದರಿಯಾಗಿದೆ. ಇಂತಹ ಕ್ರಾಂತಿವೀರ ಸಮಾಧಿ ಸ್ಥಳ ಇಷ್ಟು ದಿನ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಆದರೇ ಇದೀಗ ಕಾಂತ್ರಿವೀರನ ಸಮಾಧಿ ಸ್ಥಳದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಇನ್ನೂ ಅನೇಕ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ರಾಯಣ್ಣನ ಮ್ಯೂಸಿಯಂ ಎಲ್ಲರ ಗಮನ ಸೆಳೆಯಲಿದೆ.

ಖಾನಾಪುರ ತಾಲೂಕಿನ ನಂದಗಡ ರಾಯಣ್ಣ ಸಮಾಧಿ ಅಭಿವೃದ್ಧಿಗೆ ಇದೀಗ ಸರ್ಕಾರ ಮುಂದಾಗಿದೆ. ರಾಯಣ್ಣನನ್ನು ಗಲ್ಲಿಗೆ ಏರಿಸಿದ್ದ ಸ್ಥಳದಲ್ಲಿ 12.38 ಎಕರೆ ಸ್ಥಳದಲ್ಲಿ ಮ್ಯೂಸಿಯಂ ಸ್ಥಾಪನೆಗೆ ಮುಂದಾಗಿದೆ. 12 ಅಡಿಯಲ್ಲಿ ರಾಯಣ್ಣನ ಚರಿತೆ ಮರುಸೃಷ್ಟಿಗೆ ಯೋಜನೆ ರೂಪಿಸಲಾಗಿದೆ. 18ನೇ ಶತಮಾನದ ರಾಯಣ್ಣನ ಇತಿಹಾಸ ಜನರ ಕಣ್ಣಮುಂದೆ ಬರಲಿದೆ.

ಸಿದ್ದರಾಮಯ್ಯ ಅವರನ್ನು ಹೊಗಳಿದ ಸಚಿವ ಸಿಎಸ್ ಶಿವಳ್ಳಿ
ಮ್ಯೂಸಿಯಂ ಸ್ಥಾಪನೆಗಾಗಿ 75.29 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಈ ಕಾಮಗಾರಿಗೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಸಿದ್ದರಾಮಯ್ಯಗೆ ಸಚಿವರಾದ ಆರ್. ವಿ ದೇಶಪಾಂಡೆ, ಪುಟ್ಟರಂಗ ಶೆಟ್ಟಿ ಹಾಗೂ ಸಿ.ಎಸ್ ಶಿವಳ್ಳಿ ಸಾಥ್ ನೀಡಿದ್ದರು. ಇನ್ನೂ ಶಂಕುಸ್ಥಾಪನೆ ನಂತರ ಮಾತನಾಡಿದ ಸಚಿವ ಶಿವಳ್ಳಿ, ಸಿದ್ದರಾಮಯ್ಯ ಅವರನ್ನು ಸಿಎಂ ಎಂದೇ ಕರೆದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಯಣ್ಣ ಗಲ್ಲಿಗೆ ಏರಿಸಲಾಗಿದೆ. ಸಿದ್ದರಾಮಯ್ಯ ಅವರನ್ನು ಗಲ್ಲಿಗೆ ಏರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಬಗ್ಗೆ ಯಾವ ಅರ್ಥದಲ್ಲಿ ಶಿವಳ್ಳಿ ಹೀಗೆ ಹೇಳಿದರು. ಅನ್ನೋದು ನಿಗೂಢ.

ರಾಯಣ್ಣನ ಮ್ಯೂಸಿಯಂ ಮಾತ್ರವಲ್ಲಿ ನಂದಗಡದಲ್ಲಿ ಕೆರೆ ಅಭಿವೃದ್ಧಿ, ಯಾತ್ರಿ ನಿವಾಸ ಸ್ಥಾಪನಗೆ ಇಂದು ಶಂಕು ಸ್ಥಾಪನೆ ನಡೆಸಲಾಗಿದೆ. ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ರಾಯಣ್ಣ ಸೈನಿಕ ಶಾಲೆ ಆರಂಭಕ್ಕೆ ಸರ್ಕಾರ ಮುಂದಾಗಿದೆ. ಇನ್ನೂ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣ ಸ್ಮಾರಕ ಅಭಿವೃದ್ಧಿಗೆ ಎಚ್. ಎಂ ರೇವಣ್ಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ನೀಡಿದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಲಾಗಿದೆ. ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ, ಸಮಾಧಿ ಸ್ಥಳದ ಅಭಿವೃದ್ಧಿಗೆ ಸರ್ಕಾರ 267 ಕೋಟಿ ನೀಡಲಾಗಿದೆ ಎಂದರು.

ಸಿದ್ದರಾಮಯ್ಯಗೆ ಅಭಿಮಾನಿಯಿಂದ ಕುರಿಮರಿ ಗಿಫ್ಟ್

ಸರ್ಕಾರಿ ಕಾರ್ಯಕ್ರಮದಲ್ಲಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮರಾಠಿ ಪ್ರೇಮ ಮೆರೆದರು. ಇನ್ನೂ ಸಿದ್ದರಾಮಯ್ಯಗೆ ಅಭಿಮಾನಿಯೊಬ್ಬ ಕುರಿಮರಿಯನ್ನು ಗಿಫ್ಟ್ ಕೊಟ್ಟು ಖುಷಿ ಪಟ್ಟರು. ಇನ್ನೂ ರಾಯಣ್ಣನ ಮ್ಯೂಸಿಯಂ ಶೀಘ್ರದಲ್ಲಿ ಅನುಷ್ಠಾನಗೊಳ್ಳಿ ಎಂಬುದು ರಾಯಣ್ಣ ಅಭಿಮಾನಿಗಳ ಆಶಯವಾಗಿದೆ. ಸದ್ಯ ನಂದಗಡಕ್ಕೆ ಭೇಟಿನೀಡುವ ಪ್ರವಾಸಿಗರು ನಿರಾಶೆಯಿಂದ ಹೋಗುತ್ತಿದ್ದು ಮುಂದೆ ಮ್ಯೂಸಿಯಂ ನಿಂದ ಪ್ರವಾಸಿಗರು ಹಾಗೂ ರಾಯಣ್ಣ ಅಭಿಮಾನಿಗಳಿಗೆ ಆತನ ಶೌರ್ಯ, ಪರಾಕ್ರಮದ ತಿಳಿಯುವ ಅವಕಾಶ ಸಿಗಲಿದೆ.

Comments are closed.