ರಾಷ್ಟ್ರೀಯ

ಟೊಮೆಟೊ ರಫ್ತು ಬಂದ್ ಗೆ ಪ್ರತಿಯಾಗಿ ಅಣುಬಾಂಬ್​​ ದಾಳಿ; ಭಾರತಕ್ಕೆ ಪಾಕ್​ ಮಾಧ್ಯಮದ ಬೆದರಿಕೆ!

Pinterest LinkedIn Tumblr


ನವದೆಹಲಿ: ಪುಲ್ವಾಮಾ ದಾಳಿ ನಂತರದಲ್ಲಿ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನದಲ್ಲಿರುವ ಭಾರತ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಆಮದು ಸುಂಕ ಏರಿಕೆ, ಪಾಕ್​ಗೆ ನೀರು ಬಿಡುವುದನ್ನು ನಿಲ್ಲಿಸಿದ್ದು, ಟೊಮೊಟೊ ರಫ್ತು ಸ್ಥಗಿತಗೊಳಿಸಿದ್ದು ಪ್ರಮುಖವಾದುದು. ಇದರ ಪರಿಣಾಮ ಪಾಕ್​ನಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಈ ಬಗ್ಗೆ ಅಲ್ಲಿನ ಮಾಧ್ಯಮಗಳು ಕಿಡಿಕಾರಿದ್ದು, ಟೊಮೆಟೊ ರಫ್ತು ಬಂದ್ ಮಾಡಿದ್ದಕ್ಕೆ ಪ್ರತಿಯಾಗಿ ಅಣು ಬಾಂಬ್​ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೋಲಾರದ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲಿಯೇ 2ನೇ ಅತಿದೊಡ್ಡ ಟೊಮೆಟೊ ವಹಿವಾಟು ನಡೆಸುವ ಕೇಂದ್ರ. ಕೋಲಾರದಿಂದ ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಬಂದ್​ ಮಾಡಲು ಈ​ ಮಾರುಕಟ್ಟೆ ನಿರ್ಧಾರ ಮಾಡಿದೆ. ಇದಕ್ಕೆ ಪಾಕಿಸ್ತಾನ ಮಾಧ್ಯಮಗಳು ಕಿಡಿಕಾರಿವೆ. ಈ ಬಗ್ಗೆ ಆ್ಯಂಕರ್​ ಒಬ್ಬರು ಲೈವ್​ನಲ್ಲಿ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ.

“ನಾವು ಈ ಟೊಮಾಟೊವನ್ನು ರಾಹುಲ್​ ಅಥವಾ ಮೋದಿ ಅವರ ಮುಖಕ್ಕೆ ಎಸೆಯುತ್ತೇವೆ. ಭಾರತ ಕೊಳಕು ತುಂಬಿದ ರಾಷ್ಟ್ರ. ಟೊಮಾಟೊಗೆ ಪ್ರತಿಯಾಗಿ ಆ್ಯಟಂಬಾಂಬ್​ ಮೂಲಕ ಉತ್ತರ ಕೊಡುವ ಸಮಯ ಬಂದಿದೆ,” ಎಂದು ಪಾಕ್​ ಆ್ಯಂಕರ್​ ಓರ್ವ ಹೇಳಿಕೊಂಡಿದ್ದಾರೆ. ಅಲ್ಲದೆ, ಸಮಯ ಬಂದರೆ ನಾವು ಅಣುಬಾಂಬ್​ ದಾಳಿ ಮಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಆ್ಯಂಕರ್​ ತುಂಬಾನೇ ಸಿಟ್ಟಿನಿಂದ ಮಾತನಾಡಿದ್ದರು. ಎರಡು ನಿಮಿಷಗಳ ಕಾಲ ಎಲ್ಲಿಯೂ ಬ್ರೇಕ್​ ತೆಗೆದುಕೊಳ್ಳದೆ ಅವರು ನಿರಂತರವಾಗಿ ಭಾರತದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗಿದೆ. “ಈತನ ಮಾತು ಕೇಳಿ ಅವರ ಕಚೇರಿಯಲ್ಲಿ ಕುಳಿತವರೇ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಹೀಗಿರುವಾಗ ನಮಗೆ ನಗು ಬರದೆ ಇರುತ್ತದೆಯೇ,” ಎಂದು ಪ್ರಶ್ನಿಸಿದ್ದಾರೆ.

Comments are closed.