ಕರ್ನಾಟಕ

Onlineನಲ್ಲಿ ಬುಕ್ ಮಾಡಿದ್ದು ದುಬಾರಿ ಮೊಬೈಲ್, ಬಂದಿದ್ದು?

Pinterest LinkedIn Tumblr


ಬೆಂಗಳೂರು: ಆನ್ ಲೈನ್ ಮೂಲಕ ದುಬಾರಿ ಮೊಬೈಲ್ ಫೋನ್ ಬುಕ್ ಮಾಡಿದ್ದ ಗ್ರಾಹಕರೊಬ್ಬರಿಗೆ ಮೊಬೈಲ್ ಬದಲು 10 ರೂಪಾಯಿ ಸೋಪು ನೀಡಿ ವಂಚಿಸಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಉತ್ತರಹಳ್ಳಿ ನಿವಾಸಿ ವೆಂಕಟೇಶ್ ಎಂಬವರು ಆನ್ ಲೈನ್ ನಲ್ಲಿ ಬರೋಬ್ಬರಿ 85 ಸಾವಿರ ರೂಪಾಯಿ ಪಾವತಿಸಿ ದುಬಾರಿ ಮೊಬೈಲ್ ಬುಕ್ ಮಾಡಿದ್ದರು. 2-3 ದಿನಗಳಲ್ಲಿಯೇ ಅವರಿಗೆ ಪಾರ್ಸೆಲ್ ಬಂದಿತ್ತು. ಆದರೆ ಅದನ್ನು ಓಪನ್ ಮಾಡಿದಾಗ ಅವರಿಗೆ ಕಂಡಿದ್ದು 10 ರೂಪಾಯಿ ಸೋಪು ಮಾತ್ರ!. ಅಷ್ಟರಲ್ಲಿ ಡೆಲಿವರಿ ಬಾಯ್ ವೆಂಕಟೇಶ್ ಅವರ ಸಹಿಯನ್ನು ತೆಗೆದುಕೊಳ್ಳದೆ ಹೊರಟು ಹೋಗಿದ್ದ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಇ ಮೇಲ್ ಮೂಲಕ ಕಂಪನಿಗೆ ತನಗಾದ ವಂಚನೆ ಬಗ್ಗೆ ದೂರನ್ನು ಸಲ್ಲಿಸಿದಾಗ, 72 ಗಂಟೆಯೊಳಗೆ ನಿಮ್ಮ ಹಣ ಪಾವತಿಸುವುದಾಗಿ ಉತ್ತರ ನೀಡಿದ್ದರಂತೆ. ಆದರೆ ಈಗ ಹಣ ವಾಪಸ್ ಕೊಡಲು ಆಗಲ್ಲ ಎಂದು ಹೇಳುತ್ತಿರುವುದಾಗಿ ವೆಂಕಟೇಶ್ ದೂರಿದ್ದಾರೆ. ಈ ಬಗ್ಗೆ ಗ್ರಾಹಕರ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

Comments are closed.