ಕರ್ನಾಟಕ

ಜೆಡಿಎಸ್​ ಸಭೆಗೆ ಸರ್ಕಾರಿ ಕಾರಿನಲ್ಲಿ ಬಂದ ಪ್ರಜ್ವಲ್​ ರೇವಣ್ಣ

Pinterest LinkedIn Tumblr


ಹಾಸನ: ಅಪ್ಪ ಸಚಿವ, ಚಿಕ್ಕಪ್ಪ ಮುಖ್ಯಮಂತ್ರಿ ಹೀಗಿರುವಾಗ ಸರ್ಕಾರಿ ಕಾರು ಬಳಸುವ ಹಕ್ಕಿದೆ ಎಂಬಂತೆ ಜೆಡಿಎಸ್​ ಪ್ರಧಾನ ಕಾರ್ಯದರ್ಶಿ ಸರ್ಕಾರಿ ಕಾರನ್ನು ತಮ್ಮ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ಸರ್ಕಾರಿ ವಾಹನವನ್ನು ಜೆಡಿಎಸ್​ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್​ ರೇವಣ್ಣ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಈಗ ಟೀಕೆಗೆ ಗುರಿಯಾಗಿದೆ. ಸರ್ಕಾರಿ ಅಧಿಕಾರಿಗಳು ಹಾಗೂ ಶಾಸಕರು, ಸಚಿರನ್ನು ಹೊರತು ಪಡಿಸಿ ಸರ್ಕಾರಿ ವಾಹನಗಳನ್ನು ಯಾರು ಬಳಸುವಂತೆ ಇಲ್ಲ. ಈ ರೀತಿ ಕಾನೂನು ಸರ್ಕಾರದಲ್ಲಿರುವಾಗಲೇ, ಇದಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ಪ್ರಜ್ವಲ್​ ರೇವಣ್ಣ ವರ್ತಿಸಿದ್ದಾರೆ. ಲೋಕೋಪಯೋಗಿ ಸಚಿವರಾಗಿರುವ ಅಪ್ಪನ ಅಧಿಕಾರ ಬಳಸಿಕೊಂಡು ಇಲಾಖೆ ಕಾರ್​ ಬಳಸುತ್ತಾ ದರ್ಬಾರ್​ ತೋರಿದ್ದಾರೆ.

ಪಕ್ಷದ ಕಾರ್ಯಕರ್ತರ ಸಭೆಗೆ ಇಂದು ಆಗಮಿಸಿದ ಪ್ರಜ್ವಲ್​ ರೇವಣ್ಣ ಇಂದು ಸರ್ಕಾರಿ ಕಾರಿನಲ್ಲಿ ಬಂದಿದ್ದಾರೆ. ಜಿಲ್ಲೆಯ ಕಾರ್ಯಕಾರಿ ಇಂಜಿನಿಯರ್​ ಹೆಸರಿನಲ್ಲಿರುವ ಈ ಕಾರನ್ನು ಹೇಗೆ ಪ್ರಜ್ವಲ್​ ಬಳಕೆ ಮಾಡುತ್ತಿದ್ದಾರೆ. ಪ್ರಜ್ವಲ್​ಗೆ ಸರ್ಕಾರಿ ನಿಯಮಗಳು ಅನ್ವಯವಾಗುವುದಿಲ್ಲವಾ ಎಂಬ ಪ್ರಶ್ನೆ ಮೂಡಿದೆ.

ದೇವೇಗೌಡರ ತವರಿನಲ್ಲಿ ಅವರ ಮೊಮ್ಮಗನ ಅಂಧ ದರ್ಬಾರ್​ ಟೀಕೆಗೆ ಗುರಿಯಾಗುತ್ತಲೆ, ಈ ಕುರಿತು ಲೋಕೋಪಯೋಗಿ ಇಲಾಖೆಗಳಿಗೆ ಸಂಪರ್ಕಿಸಿದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಗೆ ಸಿಗುತ್ತಿಲ್ಲ. ಅಪ್ಪನ ಹೆಸರಲ್ಲಿ ಮಗ ದರ್ಬಾರ್​ ಮಾಡುತ್ತಿದ್ದರು ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.

ಸಿಎಂ ಕುಮಾರಸ್ವಾಮಿ ಅಧಿಕಾರಕ್ಕೆ ದುಂದುವೆಚ್ಚ ಮಾಡಬಾರದು ಎಂದು ಸರ್ಕಾರಿ ಕಾರನ್ನು ನಿರಾಕರಿಸಿ ಸ್ವಂತ ಕಾರನ್ನು ತಮ್ಮ ಕೆಲಸಕ್ಕೆ ಬಳಸುತ್ತಿದ್ದಾರೆ. ಯಾವುದೇ ಸರ್ಕಾರದ ಅಧಿಕಾರವಿಲ್ಲದ ಪ್ರಜ್ವಲ್​ ರೇವಣ್ಣ ತಮ್ಮ ತಂದೆಯ ಅಧಿಕಾರ ಬಳಸಿಕೊಂಡು ಲೋಕೋಪಯೋಗಿ ಇಲಾಖೆಯ ಕಾರನ್ನು ಬಳಸುತ್ತಿರುವುದು ಟೀಕೆಗೆ ಗುರಿಯಾಗಿದೆ.

ಬಿಜೆಪಿ ವ್ಯಂಗ್ಯ:

ಸರ್ಕಾರಿ ಕಾರನ್ನು ಪ್ರಜ್ವಲ್​ ರೇವಣ್ಣ ಬಳಕೆ ಮಾಡುತ್ತಿರುವುದಕ್ಕೆ ಟೀಕೆ ಮಾಡಿರುವ ಬಿಜೆಪಿ, ಯಾರದೋ ಟ್ಯಾಕ್ಸ್​, ದೇವೇಗೌಡರ ಮೊಮ್ಮಕ್ಕಳ ಮೋಜು ಮಾಡುತ್ತಿದ್ದಾರೆ ಎಂದು ಟ್ವೀಟ್​ ಮೂಲಕ ವ್ಯಂಗ್ಯವಾಡಿದೆ.

ಜನರು ತೆರಿಗೆ ಹಣವನ್ನು ಯಾವ ರೀತಿ ದುರ್ಬಳಕೆ ಮಾಡಿಕೊಂಡು ಅವಮಾನಿಸಲಾಗುತ್ತಿದೆ ಎಂಬುದಕ್ಕೆ ಇದು ಉದಾಹರಣೆ. ಸಾಮ್ರಾಜ್ಯಶಾಹಿಗಳು ಹೇಗೆ ಆಡಳಿತ ನಡೆಸುತ್ತಾರೆ ಎಂಬುದಕ್ಕೆ ಸೂಪರ್​ ಸಿಎಂ ರೇವಣ್ಣ ಅವರ ಮಗ ಉದಾಹರಣೆ ಎಂದಿದ್ದಾರೆ.

Comments are closed.