ಕರ್ನಾಟಕ

ಬಾರ್ ನಲ್ಲಿ ಒಬ್ಬರೇ ಕೂತು ಕುಡಿಯುತ್ತಿದ್ದಿರಾ ಈ ಸುದ್ದಿಯನ್ನೊಮ್ಮೆ ಓದಿ…!

Pinterest LinkedIn Tumblr

ಬೆಂಗಳೂರು: ನೀವು ಬಾರ್ ನಲ್ಲಿ ಒಬ್ಬರೇ ಕುಡಿಯುತ್ತಿದ್ದರೆ, ಜೊತೆಗೆ ನಿಮ್ಮ ಆದಾಯದ ಬಗ್ಗೆ ಅಕ್ಕಪಕ್ಕದವರ ಬಳಿ ಹೇಳಿಕೊಂಡಿದ್ದರೆ ಸ್ವಲ್ಪ ಹುಷಾರಾಗಿರಿ. ಕಾರಣ ನಿಮ್ಮ ಅಕ್ಕಪಕ್ಕದಲ್ಲೇ ದರೋಡೆಕೋರರು ಇರಬಹುದು. ನೀವು ಅಲ್ಲಿಂದ ಹೊರಟಾಗ ನಿಮ್ಮನ್ನು ದೋಚಿಕೊಂಡು ಹೋಗಬಹುದು.

ಇಲ್ಲಿ ಆಗಿದ್ದೂ ಅದೇ, 27 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರನ್ನು ಅಪಹರಿಸಿದ ಮೂರು ಜನರ ತಂಡವೊಂದು ಆಟೋರಿಕ್ಷಾ ಮೂಲಕ ಹೊರ ವಲಯಕ್ಕೆ ಕರೆದು ಬೆಲೆಬಾಳುವ ಆಭರಣ ಸಹಿತ ಹಣವನ್ನು ದೋಚಿ ಪರಾರಿಯಾಗಿದೆ.

ಹೆಸರುಘಟ್ಟದ ನಿವಾಸಿ ದರೋಡೆಗೆ ಒಳಗಾದ ವ್ಯಕ್ತಿ. ಇವರ ಮೊಬೈಲ್, ಪರ್ಸ್ ಸಹಿತ ಬೆಲೆಬಾಳುವ ಚಿನ್ನದ ಆಭರಣಗಳನ್ನು ದೋಚಲಾಗಿದೆ. ಆದರೆ ಕಳ್ಳರ ಬಳಿ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇರುವುದರಿಂದ ಭಯಗೊಂಡು ಪೊಲೀಸರಿಗೆ ದೂರು ಕೊಡಲು ಹಿಂದೇಟು ಹಾಕಿದ್ದರು.

ಬಳಿಕ ಸ್ನೇಹಿತರ ಒತ್ತಾಯದ ಮೇಲೆ ಪೊಲೀಸರಿಗೆ ಬರೋಬ್ಬರಿ 54 ದಿನದ ನಂತರ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಬಾರ್ ನ ಸಿಸಿ ಟಿವಿ ಫುಟೇಜನ್ನು ಹೊರತೆಗೆದಿದ್ದಾರೆ. ಅಲ್ಲಿ ದರೋಡೆಕೋರರ ಕುರಿತು ಪತ್ತೆ ಹಚ್ಚಿ ಅವರನ್ನು ಬಂಧಿಸಿದ್ದಾರೆ.

Comments are closed.