ರಾಷ್ಟ್ರೀಯ

ಶಾಕಿಂಗ್ ನ್ಯೂಸ್! ಉಚಿತ ಒಳಬರುವ ಕರೆಗಳಿಗೆ ಬ್ರೇಕ್ : ಟೆಲಿಕಾಂನಿಂದ ಹೊಸ ನಿಯಮ ಜಾರಿ

Pinterest LinkedIn Tumblr

ಟೆಲಿಕಾಂ ಕಂಪನಿಗಳು ಒಂದಾಗಿರುವ ಮೊದಲ ಹಂತವಾಗಿ ಕನಿಷ್ಠ ರೀಚಾರ್ಜ್ ನಿಯಮವನ್ನು ಜಾರಿಗೊಳಿಸಲಾಗಿದೆ. ಇಲ್ಲಿಯವರೆಗೆ ಲೈಫ್ ಟೈಮ್ ಸಿಮ್ ಗಳಿಗೆ ಇದ್ದ ಉಚಿತ ಒಳಬರುವ ಕರೆಗಳ ಸೌಲಭ್ಯಕ್ಕೆ ಬ್ರೇಕ್ ಬೀಳಲಿದೆ.

ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಪ್ರವೇಶಾತಿ ನಂತರ ಸಾಕಷ್ಟು ಬದಲಾವಣೆಗಳಾಗಿವೆ. ಜಿಯೋ ನೀಡಿದ ಅಗ್ಗದ ಮತ್ತು ಉಚಿತ ಯೋಜನೆಗಳಿಂದಾಗಿ ಪ್ರಮುಖ ಟೆಲಿಕಾಂ ಕಂಪನಿಗಳು ತತ್ತರಿಸಿ ಹೋಗಿವೆ. ಇದು ದರ ಸಮರಕ್ಕೆ ಕಾರಣವಾಗಿ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಉಳಿಸಲು, ಹೊಸ ಗ್ರಾಹಕರನ್ನು ಸೆಳೆಯಲು ಹರಸಾಹಸ ಪಡುತ್ತಲೇ ಇವೆ. ಇದರ ಪರಿಣಾಮವಾಗಿ ಕೆಲವೊಂದು ಕಂಪನಿಗಳು ವಿಲೀನಗೊಂಡಿವೆ. ಅಲ್ಲದೆ ಜಿಯೋಗೆ ಸೆಡ್ಡು ಹೊಡೆಯಲು ಇತರೆ ಟೆಲಿಕಾಂ ಕಂಪನಿಗಳು ಒಂದಾಗಿದ್ದು, ಏಕರೂಪದ ದರ ವಿಧಿಸಲು ಮುಂದಾಗಿವೆ ಎಂದು ಹೇಳಲಾಗಿದೆ.

ಉಚಿತ ಒಳಬರುವ ಕರೆಗಳಿಗೆ ಬ್ರೇಕ್
ಟೆಲಿಕಾಂ ಕಂಪನಿಗಳು ಒಂದಾಗಿರುವ ಮೊದಲ ಹಂತವಾಗಿ ಕನಿಷ್ಠ ರೀಚಾರ್ಜ್ ನಿಯಮವನ್ನು ಜಾರಿಗೊಳಿಸಲಾಗಿದೆ. ಇಲ್ಲಿಯವರೆಗೆ ಲೈಫ್ ಟೈಮ್ ಸಿಮ್ ಗಳಿಗೆ ಇದ್ದ ಉಚಿತ ಒಳಬರುವ ಕರೆಗಳ ಸೌಲಭ್ಯಕ್ಕೆ ಬ್ರೇಕ್ ಬೀಳಲಿದೆ. ಗ್ರಾಹಕರು ಇನ್ನುಮುಂದೆ ಒಳಬರುವ ಕರೆ ಸೌಲಭ್ಯವನ್ನು ಪಡೆಯಲು ಪ್ರತಿ ತಿಂಗಳು ನಿಗದಿತ ಮೌಲ್ಯದ ರೀಚಾರ್ಜ್ ಮಾಡಿಸುವುದು ಅನಿವಾರ್ಯವಾಗಿದೆ. ಈಗಾಗಲೇ ಪ್ರಮುಖ ಕಂಪನಿಗಳಿಗೆ ಕನಿಷ್ಠ ರೀಚಾರ್ಜ್ ನಿಯಮ ಅನ್ವಯವಾಗುತ್ತಿದೆ.

ಒಳಬರುವ ಕರೆಗಾಗಿ ತಿಂಗಳಿಗೆ ರೂ. 35-75 ರೀಚಾರ್ಜ್
ಲೈಫ್ ಟೈಮ್ ಅಥವಾ ದೀರ್ಘಾವಧಿಯ ಉಚಿತ ಒಳಬರುವ ಕರೆಗಳಿಂದಾಗಿ ಬಳಕೆದಾರರು ರೀಚಾರ್ಜ್ ಮಾಡುತ್ತಿರಲಿಲ್ಲ. ಇದಕ್ಕಾಗಿ ತಿಂಗಳಿಗೆ ನಿರ್ದಿಷ್ಟ ಮೊತ್ತ ರೀಚಾರ್ಜ್ ಮಾಡಿಕೊಳ್ಳಲು ಕಂಪನಿಗಳು ಚಿಂತಿಸಿವೆ. ಆರಂಭದಲ್ಲಿ ಒಳಬರುವ ಕರೆಗಳಿಗಾಗಿ ತಿಂಗಳಿಗೆ ರೂ. 35 ರೀಚಾರ್ಜ್ ದರ ವಿಧಿಸಲಿದ್ದು, ನಂತರದಲ್ಲಿ ರೂ. 75 ರವರೆಗೆ ಏರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಾರ್ವಜನಿಕರ ಆಕ್ರೋಶ
ಗ್ರಾಹಕರು ಹೊಸ ಸಿಮ್ ಖರೀದಿಸುವಾಗ ಲೈಫ್ ಟೈಮ್ ಉಚಿತ ಒಳಬರುವ ಕರೆಗಳು ಕಂಪನಿಗಳು ಹೇಳಿದ್ದವು. ಆದರೆ ಕಂಪನಿಗಳಿಗಾಗುತ್ತಿರುವ ನಷ್ಟ ಕಡಿಮೆ ಮಾಡಿಕೊಳ್ಳಲು ಗ್ರಾಹಕರು ಪ್ರತಿ ತಿಂಗಳು ರೀಚಾರ್ಜ್ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಏರ್ಟೆಲ್, ವೊಡಾಫೋನ್, ಐಡಿಯಾದಿಂದ ನಿಯಮ ಜಾರಿ
ಕಳೆದ ನವೆಂಬರ್ ತಿಂಗಳಿನಿಂದ ಏರ್ಟೆಲ್ ತನ್ನ 2G ಸಿಮ್ ಬಳಕೆದಾರರಿಗೆ ಕನಿಷ್ಟ ರೀಚಾರ್ಜ್ ನಿಯಮ ಜಾರಿ ತಂದಿದ್ದು, ಇದಾದ ನಂತರ ವೊಡಾಫೋನ್, ಐಡಿಯಾಗಳು ಈ ನಿಯಮವನ್ನು ಜಾರಿ ಮಾಡಿವೆ. ಈ ನಿಯಮದ ಬಗ್ಗೆ ಏರ್ಟೆಲ್ ಐಡಿಯಾ, ವೊಡಾಫೋನ್ ಕಂಪನಿಗಳು ಟ್ರಾಯ್ ಗೆ ಮನವಿ ಸಲ್ಲಿಸಿವೆ. ಮುಂದೇನಾಗಬಹುದು ಕಾದು ನೋಡಬೇಕಿದೆ..

ಏರ್ಟೆಲ್ ಹೇಳಿದ್ದೇನು?
ಕನಿಷ್ಠ ರೀಚಾರ್ಜ್ ನಿಯಮ ಬಗ್ಗೆ, ಮುಂದಿನ ದಿನಗಳಲ್ಲಿ ತಿಂಗಳಿಗೆ ಕನಿಷ್ಟ ರೂ. 35 ರೀಚಾರ್ಜ್ ಮಾಡುವುದು ಕಡ್ಡಾಯವಾಗಲಿದ್ದು, ನಂತರದಲ್ಲಿ ರೂ. 75 ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಏರ್ಟೆಲ್ ಕಂಪನಿಯ ಸುನೀಲ್ ಮಿತ್ತಲ್ ಭಾರ್ತಿ ತಿಳಿಸಿದ್ದಾರೆ.

ಕನಿಷ್ಟ ರೀಚಾರ್ಜ್ ನಿಯಮಕ್ಕೆ ಕಾರಣ
ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಎಬ್ಬಿಸಿರುವ ಅಲೆಯ ಪ್ರಭಾವ ಇದಾಗಿದ್ದು, ಜಿಯೋ ನಿಯಂತ್ರಣಕ್ಕಾಗಿ ದೇಶದ ಪ್ರಮುಖ ಸಂಸ್ಥೆಗಳು ಒಗ್ಗೂಡಿ ಮುಂದಿನ ಪ್ಲಾನ್ ಮಾಡಲಿವೆ ಎನ್ನಲಾಗಿದೆ. ಈಗಾಗಲೇ ಜಿಯೋ ದೇಶದ ಹಳ್ಳಿಹಳ್ಳಿಗೂ ವ್ಯಾಪಿಸಿದ್ದು, ಗ್ರಾಹಕರು ಅಗ್ಗದ ಯೋಜನೆಗಳನ್ನು ಆನಂದಿಸುತ್ತಿದ್ದಾರೆ.

ಎರಡು ಸಿಮ್ ಗಳಿದ್ದರೆ?
ಹೆಚ್ಚಿನ ಗ್ರಾಹಕರ ಬಳಿ ಸಾಮಾನ್ಯವಾಗಿ ಎರಡೆರಡು ಸಿಮ್ ಗಳು ಇರುತ್ತವೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಒಂದನ್ನು ಒಳಬರುವ ಕರೆಗಳಿಗಾಗಿ ಬಳಸಿದರೆ, ಇನ್ನೊಂದನ್ನು ಕರೆ ಮಾಡಲು ಬಳಸುತ್ತಿದ್ದರು. ಆದರೆ ಇನ್ನುಮುಂದೆ ಮೊಬೈಲ್ ಗ್ರಾಹಕರು ಎರಡೂ ಸಿಮ್ ಗಳ ಚಾಲ್ತಿಗಾಗಿ ಪ್ರತಿ ತಿಂಗಳು ರೀಚಾರ್ಜ್ ಮಾಡಿಸಬೇಕಾಗುತ್ತದೆ.

Comments are closed.