ಕರ್ನಾಟಕ

ಮಧ್ಯರಾತ್ರಿ ನಿದ್ರೆ ಮಾಡುತ್ತಿದ್ದ ಮಹಿಳೆಗೆ ವಿಡಿಯೋ ಕಾಲ್ ಮಾಡಿ ಬೆತ್ತಲೆ ನಿಂತ ಕಾಮುಕ !

Pinterest LinkedIn Tumblr

ಬೆಂಗಳೂರು: ಮಹಿಳೆಯರೇ ಅನಾಮಿಕ ನಂಬರ್ ನಿಂದ ಕರೆ ಬಂದರೆ ಪಿಕ್ ಮಾಡುವ ಮುನ್ನ ಹುಷಾರಾಗಿರಿ. ಏಕೆಂದರೆ ಕಾಮುಕರು ತಡರಾತ್ರಿ ವಿಡಿಯೋ ಕಾಲ್ ಮಾಡಿ ನಿಮ್ಮ ಮುಂದೆ ಬೆತ್ತಲೆ ನಿಲ್ಲುತ್ತಾರೆ.

ಖಾಸಗಿ ಕಂಪನಿಯ ಮಹಿಳಾ ಮ್ಯಾನೇಜರ್‍ಗೆ ಅಪರಿಚಿತನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ತಡರಾತ್ರಿ ವಿಡಿಯೋ ಕಾಲ್ ಮಾಡಿ ಮಹಿಳೆ ಮುಂದೆ ಬೆತ್ತಲಾಗಿ ನಿಂತಿದ್ದಾನೆ. ಕಳೆದ 12ರಂದು ನಸುಕಿನ ಜಾವ ಸುಮಾರು 2:47ಕ್ಕೆ ಕಾಮುಕ ಮಹಿಳೆಗೆ ಎರಡು ಬಾರಿ ವಿಡಿಯೋ ಕಾಲ್ ಮಾಡಿದ್ದಾನೆ.

ಈ ವೇಳೆ ನಿದ್ರೆಯಲ್ಲಿದ್ದ ಮಹಿಳೆ ಒಮ್ಮೆ ಕಾಲ್ ಪಿಕ್ ಮಾಡಿ ಕಟ್ ಮಾಡಿದ್ದಾರೆ. ನಂತರ ಕಾಮುಕ ಮತ್ತೆ ವಿಡಿಯೋ ಕಾಲ್ ಮಾಡಿ ಮರ್ಮಾಂಗ ಪ್ರದರ್ಶನ ಮಾಡಿ ವಿಕೃತಿ ಮರೆದಿದ್ದಾನೆ. ಕಾಮುಕ ವಿಡಿಯೋ ಕಾಲ್ ನಲ್ಲಿ ವಿಕೃತಿ ಮೆರೆದಿದ್ದಲ್ಲದೇ, ಮಹಿಳೆಗೆ ಅಸಭ್ಯವಾಗಿ ನಿಂದಿಸಿದ್ದಾನೆ.

ಮಹಿಳೆ ತನ್ನ ಮೇಲಾದ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾಳೆ. ಅಲ್ಲದೇ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾಳೆ. ಬೆಂಗಳೂರು ಸಿಟಿ ಪೊಲೀಸ್ ಪೇಜ್ ನಲ್ಲಿ ಮಹಿಳೆ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಅಳಲು ತೋಡಿಕೊಂಡಿದ್ದಾಳೆ.

Comments are closed.